ನವದೆಹಲಿ : ಮಂಗಳವಾರದಿಂದ ಜಾರಿಗೆ ಬರುವಂತೆ ಪೆಟ್ರಸ್ ಎಲ್ಬರ್ಸ್ ಇಂಡಿಗೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿ ನಿಯಂತ್ರಕ ಫ್ಲಿಂಗ್ನಲ್ಲಿ ತಿಳಿಸಿದೆ.
“ಸೆಪ್ಟೆಂಬರ್ 6, 2022 ರಿಂದ ಜಾರಿಗೆ ಬರುವಂತೆ ಪೆಟ್ರಸ್ ಜೊಹಾನ್ಸ್ ಥಿಯೋಡೋರಸ್ ಎಲ್ಬರ್ಸ್ (ಪೀಟರ್ ಎಲ್ಬರ್ಸ್) ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರಿಕೊಂಡಿದ್ದಾರೆ ಎಂದು ಸೆಬಿ ಎಲ್ಒಡಿಆರ್ ನಿಬಂಧನೆಗಳ 30ರ ಅಡಿಯಲ್ಲಿ ನಿಮಗೆ ತಿಳಿಸಲು ನಾವು ಬಯಸುತ್ತೇವೆ” ಎಂದು ಇಂಡಿಗೋ ಹೇಳಿದೆ.