ನವದೆಹಲಿ: ಇಂಡಿಗೋ ವಿಮಾನ(IndiGo flight)ವೊಂದು ಥಾಯ್ಲೆಂಡ್ನ ಫುಕೆಟ್ಗೆ ಟೇಕ್ ಆಫ್ ಆದ ನಂತ್ರ ತಾಂತ್ರಿಕ ದೋಷದಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
IndiGo 6E-1763 ಥೈಲ್ಯಾಂಡ್ಗೆ ಹೋಗಲು ಇಂದು ಬೆಳಗ್ಗೆ 6:41 ಕ್ಕೆ ಟೇಕ್ ಆಫ್ ಆಗಿತ್ತು. ಈ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ ನಂತ್ರ ವಿಮಾನ ಬೆಳಿಗ್ಗೆ 7:31 ರ ಸುಮಾರಿಗೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
“ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ ನಂತರ ಇಂಡಿಗೋ ಪೈಲಟ್ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ಗೆ ಕೇಳಿದರು. ಹೀಗಾಗಿ, ಎಟಿಸಿ ಲ್ಯಾಂಡ್ ಮಾಡಲು ಅವಕಾಶ ಮಾಡಿಕೊಟ್ಟಿತು ಮತ್ತು ಕಾರ್ಯವಿಧಾನದ ಪ್ರಕಾರ ಪೂರ್ಣ ತುರ್ತು ಲ್ಯಾಂಡಿಂಗ್ ಘೋಷಿಸಿತು” ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.
ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ಟರ್ಮಿನಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ನಂತ್ರ, ಅವರ ಮುಂದಿನ ಪ್ರಯಾಣಕ್ಕಾಗಿ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಯಿತು. “ಫೂಕೆಟ್ಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ಒದಗಿಸಲಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ” ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
BIGG NEWS : ಯು.ಟಿ. ಖಾದರ್ಗೆ ಫೋನ್ ಮಾಡಿ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ವಂಚನೆ : ಕೇಸ್ ದಾಖಲು
BIGG NEWS : ಯು.ಟಿ. ಖಾದರ್ಗೆ ಫೋನ್ ಮಾಡಿ ರಾಹುಲ್ ಗಾಂಧಿ ಪಿಎ ಹೆಸರಲ್ಲಿ ವಂಚನೆ : ಕೇಸ್ ದಾಖಲು