ಮುಂಬೈ: ಆನ್ಲೈನ್ ಪಾವತಿಗೆ ಹೆಸರುವಾಸಿಯಾಗಿರುವ ಫೋನ್ಪೇ ಕಂಪನಿಯ ಆಡಳಿತ ಮಂಡಳಿಯು ಕಂಪನಿಯ ಮುಖ್ಯ ಕಚೇರಿಯನ್ನು ಮುಂಬೈನಿಂದ ಕರ್ನಾಟಕಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಕಂಪನಿಯು ತನ್ನ ಮುಂಬೈ ಕಚೇರಿಯನ್ನು ಕರ್ನಾಟಕಕ್ಕೆ ಸ್ಥಳಾಂತರಿಸುವ ಬಗ್ಗೆ ಜಾಹೀರಾತನ್ನು ಪ್ರಕಟಿಸಿದೆ. ಕಂಪನಿಯು ತನ್ನ ನೋಂದಾಯಿತ ಕಚೇರಿಯನ್ನು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಲು ಕಂಪನಿ ಕಾಯಿದೆ, 2013 ರ ಸೆಕ್ಷನ್ 13 ರ ಅಡಿಯಲ್ಲಿ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಕಂಪನಿಯ ಮೆಮೊರಾಂಡಮ್ ಆಫ್ ಅಸೋಸಿಯೇಷನ್ನಲ್ಲಿ ತಿದ್ದುಪಡಿಯನ್ನು ಅನುಮೋದಿಸಲು 16 ಆಗಸ್ಟ್ 2022 ರಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಶೇಷ ನಿರ್ಣಯವನ್ನು ಅಂಗೀಕರಿಸಲಾಯಿತು.
ಸಂಸ್ಥೆಯ ಕಚೇರಿಯನ್ನು ಕರ್ನಾಟಕ ರಾಜ್ಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.