Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

Viral Video: ವೈರಲ್ ರೀಲ್‌ಗಾಗಿ ಯುವಕನ ಹುಚ್ಚಾಟ್ಟ: ರೈಲು ಹಳಿಗಳ ಮೇಲೆ ಮಲಗಿದ ಹುಡುಗ; ವಿಡಿಯೋ ವೈರಲ್

06/07/2025 6:20 PM

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News: 2025ರ ವೇಳೆಗೆ 2ನೇ ಹಂತದ ‘ಮೆಟ್ರೋ ಮಾರ್ಗ’ ಲೋಕಾರ್ಪಣೆ- ಡಿಸಿಎಂ ಡಿ.ಕೆ.ಶಿವಕುಮಾರ್
KARNATAKA

Good News: 2025ರ ವೇಳೆಗೆ 2ನೇ ಹಂತದ ‘ಮೆಟ್ರೋ ಮಾರ್ಗ’ ಲೋಕಾರ್ಪಣೆ- ಡಿಸಿಎಂ ಡಿ.ಕೆ.ಶಿವಕುಮಾರ್

By kannadanewsnow0908/02/2024 8:15 PM

ಬೆಂಗಳೂರು : “ನಮ್ಮ ಮೆಟ್ರೋ ದೇಶದ ಇತರೇ ಭಾಗಗಳ ಮೆಟ್ರೋಗಳಿಗಿಂತ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು, 2ನೇ ಹಂತದ ರೀಚ್- 6 ಮೆಟ್ರೋ ಮಾರ್ಗ 2025 ರ ವೇಳೆಗೆ ಲೋಕಾರ್ಪಣೆಯಾಗಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನಾಗವಾರ ಮುಖ್ಯರಸ್ತೆಯ ಕೆ. ಜಿ. ಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸುರಂಗ ಕೊರೆದು ಯಂತ್ರ ಹೊರಬರುವ ಪ್ರಕ್ರಿಯೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ಮಾರ್ಗದಲ್ಲಿ ಒಟ್ಟು 13.76 ಕಿ.ಮೀ ಉದ್ದ ಸುರಂಗ ಇರಲಿದ್ದು. ಡೈರಿ ವೃತ್ತದಿಂದ ನಾಗಾವರದ ತನಕ 12 ನಿಲ್ದಾಣಗಳು ಬರಲಿವೆ. ಕಾಳೇನ ಅಗ್ರಹಾರದಿಂದ ನಾಗಾವರದ ತನಕ ಈ ಮಾರ್ಗವು ಒಟ್ಟು 21.26 ಕಿಮೀ ಉದ್ದವಿದೆ. 9 ಸುರಂಗ ಕೊರೆಯುವ ಯಂತ್ರಗಳು ಈಗ ಕಾರ್ಯನಿರ್ವಹಿಸುತ್ತಿದ್ದು, 7 ಕಡೆಗಳಲ್ಲಿ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಒಟ್ಟು 12 ನಿಲ್ದಾಣಗಳಿದ್ದು, ಶೇ 75 ರಷ್ಟು ಕಾಮಗಾರಿ ಮುಗಿದಿದೆ ಎಂದರು.

ಈ ಹಂತದ ಮೆಟ್ರೋ ಕಾಮಗಾರಿ ಜವಾಬ್ದಾರಿಯನ್ನು ಅಬ್‌ಕಾಮ್, ಎಲ್‌ ಅಂಡ್ ಟಿ ಮತ್ತು ಐಟಿಡಿ ಸಂಸ್ಥೆಗಳು ಗುತ್ತಿಗೆ ತೆಗೆದುಕೊಂಡಿವೆ. ಪ್ರಸ್ತುತ ಐಟಿಡಿ ಸಂಸ್ಥೆ ಗುತ್ತಿಗೆ ತೆಗೆದುಕೊಂಡಿರುವ ಭಾಗದಲ್ಲಿ ಸುರಂಗ ಕೊರೆಯುವ ಕೆಲಸವನ್ನು ವೀಕ್ಷಿಸಲಾಯಿತು. ಜಯದೇವ ಬಳಿ ರೀಚ್ – 6, ಎಂ.ಜಿ ರಸ್ತೆಯ ಬಳಿ ಇಂಟರ್ ಚೇಂಜ್, ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ, ನಾಗವಾರ ಇಂಟರ್‌ಚೇಂಜ್ ನಿಲ್ದಾಣಗಳು ಈ ಭಾಗದ ಪ್ರಮುಖ ನಿಲ್ದಾಣಗಳಾಗಿವೆ. ನಮ್ಮ ಮೆಟ್ರೋ ಅಂತರರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡಿದೆ. ದೆಹಲಿಗಿಂತ ಉತ್ತಮವಾದ ಕೆಲಸ ನಮ್ಮಲ್ಲಿ ನಡೆದಿದೆ. ಯಾವುದೇ ಹಂತದಲ್ಲೂ ಕೆಲಸದ ಗುಣಮಟ್ಟದಲ್ಲಿ ರಾಜಿಯಾಗಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸುರಂಗ ರಸ್ತೆಗಳನ್ನು ಮಾಡುವ ಆಲೋಚನೆ ನಮ್ಮ ಮುಂದಿದೆ. ಆದ ಕಾರಣ ಎಷ್ಟು ಆಳ ಹೋಗಬೇಕಾಗುತ್ತದೆ. ಈ ಕಾರ್ಯ ಮಾಡಲು ಏನಾದರೂ ಅಡಚಣೆ ಉಂಟಾಗುತ್ತದೆಯೇ, ಸವಾಲುಗಳು ಏನು ಬರಬಹುದು ಎಂದು ತಿಳಿದುಕೊಳ್ಳಲು ಖುದ್ದಾಗಿ ಕಾಮಗಾರಿ ವೀಕ್ಷಣೆಗೆ ಬಂದಿದ್ದೇನೆ ಎಂದು ಹೇಳಿದರು.

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆ ಬಗ್ಗೆ ಸಾರ್ವಜನಿಕ ಚರ್ಚೆ ಏರ್ಪಟ್ಟಿದೆ ಎನ್ನುವ ಪ್ರಶ್ನೆಗೆ “ಈಗಾಲೇ ಕಾಮಗಾರಿ ವೇಗದಿಂದ ಸಾಗುತ್ತಿದೆ. ಪಿಲ್ಲರ್‌ಗಳನ್ನು ಹಾಕದೆ ಇರುವ ಕಡೆ ಎರಡು ಹಂತಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಮೇಲಿನ ಹಂತದಲ್ಲಿ ಮೆಟ್ರೋ ಕೆಳಗಿನ ಹಂತದಲ್ಲಿ ರಸ್ತೆ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಈ ಆಲೋಚನೆಯನ್ನು ಅನುಷ್ಠಾನ ಮಾಡುವಂತೆ ತಿಳಿಸಿದ್ದೇನೆ ಎಂದರು.

ಇದರಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಆಗುವಂತಹ ಶೇ 60 ರಷ್ಟು ವೆಚ್ಚ ತಗ್ಗಲಿದೆ. ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ಈ ಯೋಜನೆಗೆ ವೆಚ್ಚ ಮಾಡಲಿವೆ. ಮೇಲ್ಸೇತುವೆ ನಿರ್ಮಾಣದ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಈ ರೀತಿಯ ಯೋಜನೆ ರೂಪಿಸಲಾಗಿದೆ. ನಾಗ್ಪುರದಲ್ಲಿ ಈ ರೀತಿಯ ಯೋಜನೆ ಗಮನಿಸಿದ್ದೆ. ಮುಂದಿನ ಮೆಟ್ರೋ ಕಾಮಗಾರಿಗಳಲ್ಲಿ ಈ ಆಲೋಚನೆಯನ್ನು ಕಾರ್ಯಗತ ಮಾಡುತ್ತೇವೆ ಎಂದು ತಿಳಿಸಿದರು.

2024 ರಲ್ಲಿಯೇ ಕಾಮಗಾರಿ ಮುಗಿಯುತ್ತದೆ ಎಂದು ಹೇಳಲಾಗಿತ್ತು ಎನ್ನುವ ಪ್ರಶ್ನೆಗೆ “ಶೇ 98 ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಭೌತಿಕ ಕೆಲಸಗಳು ಶೇ 53 ರಷ್ಟು ಪೂರ್ಣಗೊಂಡಿದೆ. 17 ಎಲಿವೇಟೆಡ್ ನಿಲ್ದಾಣಗಳ ಕೆಲಸ ಪ್ರಗತಿಯಲ್ಲಿವೆ” ಎಂದು ತಿಳಿಸಿದರು.

ಮುಂಬರುವ ಬಜೆಟ್‌ನಲ್ಲಿ ಹೊಸ ಮೆಟ್ರೋ ಮಾರ್ಗಗಳ ಯೋಜನೆ ನೀಡಲಾಗುತ್ತದೆಯೇ ಎಂದು ಕೇಳಿದಾಗ “ತುಮಕೂರು, ಆನೇಕಲ್, ಬಿಡದಿ ಮಾರ್ಗಗಳಲ್ಲಿ ಡಿಪಿಆರ್ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈಗಲೇ ಮಾಹಿತಿ ನೀಡುವುದಿಲ್ಲ. ಡಿಪಿಆರ್ ಬಂದ ನಂತರ ಮಾಹಿತಿ ನೀಡಲಾಗುವುದು. ಇಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವವೂ ಇರುವುದರಿಂದ, ಅವರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಸಂಪೂರ್ಣ ಮಾಹಿತಿ ನೀಡುತ್ತೇನೆ” ಎಂದರು.

BIGG NEWS: ಈ ರಾಜ್ಯದಲ್ಲಿ ‘ಜೈಲಿನಲ್ಲೇ ಇರುವಾಗಲೇ’ ಗರ್ಭಿಣಿಯಾಗುತ್ತಿದ್ದಾರೆ ಮಹಿಳೆಯರು!

BREAKING : ಅಮೆರಿಕದಲ್ಲಿ ಕಳೆದ 2 ವಾರಗಳಲ್ಲಿ ಭಾರತ ಮೂಲದ ಐವರು ಯುವಕರ ಸಾವು : ಕೇಂದ್ರ ಸರ್ಕಾರ ಕಳವಳ

Share. Facebook Twitter LinkedIn WhatsApp Email

Related Posts

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM1 Min Read

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM1 Min Read

D K ಶಿವಕುಮಾರ್ ಅವರ ಭಕ್ತಿ, ಶ್ರದ್ಧೆ ವರ್ಣಿಸಲು ಅಸಾಧ್ಯ: ರಂಭಾಪುರಿ ಶ್ರೀ

06/07/2025 6:13 PM3 Mins Read
Recent News

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

Viral Video: ವೈರಲ್ ರೀಲ್‌ಗಾಗಿ ಯುವಕನ ಹುಚ್ಚಾಟ್ಟ: ರೈಲು ಹಳಿಗಳ ಮೇಲೆ ಮಲಗಿದ ಹುಡುಗ; ವಿಡಿಯೋ ವೈರಲ್

06/07/2025 6:20 PM

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM

D K ಶಿವಕುಮಾರ್ ಅವರ ಭಕ್ತಿ, ಶ್ರದ್ಧೆ ವರ್ಣಿಸಲು ಅಸಾಧ್ಯ: ರಂಭಾಪುರಿ ಶ್ರೀ

06/07/2025 6:13 PM
State News
KARNATAKA

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

By kannadanewsnow0506/07/2025 6:26 PM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಂಗಳೂರಲ್ಲಿ ಘೋರವಾದ ಘಟನೆ ನಡೆದಿದ್ದು, ಕಾಡುಕೋಣೆ ದಾಳಿಗೆ 52 ವರ್ಷದ ವ್ಯಕ್ತಿ ಒಬ್ಬರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ…

ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿಯೇ, ಧರೆಗುರುಳಿದ ಬೃಹತ್ ಗಾತ್ರದ ಮರ : ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಖಂ!

06/07/2025 6:19 PM

D K ಶಿವಕುಮಾರ್ ಅವರ ಭಕ್ತಿ, ಶ್ರದ್ಧೆ ವರ್ಣಿಸಲು ಅಸಾಧ್ಯ: ರಂಭಾಪುರಿ ಶ್ರೀ

06/07/2025 6:13 PM

7-7-25 ನಾಳೆ, 777 ಅತ್ಯಂತ ಶಕ್ತಿಶಾಲಿ ಕಾಸ್ಮಿಕ್ ದಿನವಾಗಿದೆ.

06/07/2025 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.