ವಿಜಯಪುರ: ಪಿಎಫ್ಐ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬ್ಯಾನ್ ಮಾಡಬೇಕು. ಎರಡು ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾಯ ಮತ್ತೊಂದು ಪ್ರತಿರೂಪ ಪಿಎಫ್ಐ. ಸಿಮಿ ಸಂಘಟನೆ ಹುಟ್ಟಿಕೊಂಡಿದ್ದೇ .
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾರ್ವಜನಿಕ ಪ್ರದೇಶದಲ್ಲಿ ಬಾಂಬ್ ಹಾಕುವಂತಹ ಪ್ರಯತ್ನ ಮಾಡಿದ್ರು. ಅನೇಕ ಗಂಭೀರ ಆರೋಪಗಳು ದೇಶದಲ್ಲಿ ಸಾಕಷ್ಟು ಚರ್ಚೆಗೊಳಪಟ್ಪಿದ್ದವು. ಕೇಂದ್ರ ಸರ್ಕಾರ ಅತ್ಯಂತ ದೃಢ ನಿಲುವು ತಗೊಂಡಿದೆ ಎಂದರು.
ಇಡೀ ದೇಶದ ಇತಿಹಾಸದಲ್ಲಿ ಒಂದೇ ರಾತ್ರಿ 200 ಕಡೆಗಳಲ್ಲಿ ದಾಳಿ ಮಾಡಿದಾಗ ವಿದೇಶಿ ಹಣದ ದಾಖಲೆ ಸಿಕ್ಕಿವೆ. ಎರಡು ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಅನ್ನೋದು ದೇಶಭಕ್ತರ ಆಗ್ರಹವಿದೆ. ಪ್ರಧಾನಿ, ಗೃಹಮಂತ್ರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಶ್ಚಿತವಾಗಿ ಶೀಘ್ರದಲ್ಲೇ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳು ಬ್ಯಾನ್ ಆಗುತ್ತವೆ ಅನ್ನೋ ವಿಶ್ವಾಸವಿದೆ ಎಂದು ಅವರು ತಿಳಿಸಿದರು.