ಧಾರವಾಡ: ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಭಾರತದ ಸುರಕ್ಷತೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ್ದು ಆನಂದದಾಯಕ ವಿಚಾರ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಂತಸ ವ್ಯಕ್ತಪಡಿಸಿದ್ದಾರೆ.
BIG NEWS: ದೇಶದಲ್ಲಿ PFI ನಿಷೇಧ ಅತ್ಯಂತ ಸಮರ್ಥ ನಿರ್ಧಾರ;ನಳಿನ್ ಕುಮಾರ್ ಕಟೀಲ್
ನಗರದಲ್ಲಿ ಮಾತನಾಡಿದ ಅವರು, ಭಾರತದ ಸುರಕ್ಷತೆ ದೃಷ್ಠಿಯಿಂದ ಇದು ಅವಶ್ಯಕತೆ ಇತ್ತು. ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 15 ವರ್ಷಗಳ ನಮ್ಮ ಬೇಡಿಕೆ ಈಡೇರಿದೆ. ಪಿಎಫ್ಐನಂತಹ ದೇಶದ್ರೋಹಿ, ಸಮಾಜ ಕಂಟಕ, ಆತಂಕಕಾರಿಯಾದ ಈ ಸಂಘಟನೆಯನ್ನು ಮೊದಲೇ ಬ್ಯಾನ್ ಮಾಡಬೇಕಿತ್ತು. ತಡವಾಗಿ ಬ್ಯಾನ್ ಮಾಡಿದರೂ, ಈ ದೇಶಕ್ಕಾಗುವ ಗಂಡಾಂತರವನ್ನು ತಡೆಯುವ ಕೆಲಸ ಮಾಡಿದಂತಾಗಿದೆ ಎಂದರು.
BIG NEWS: ದೇಶದಲ್ಲಿ PFI ನಿಷೇಧ ಅತ್ಯಂತ ಸಮರ್ಥ ನಿರ್ಧಾರ;ನಳಿನ್ ಕುಮಾರ್ ಕಟೀಲ್
ಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಬೇಕು. ತಮ್ಮ ಸಮಾಜದ ಯುವಕರು ಯಾವ ದಿಕ್ಕಿನತ್ತ ಹೋಗುತ್ತಿದ್ದಾರೆ ಎಂಬುದನ್ನು ಮುಸ್ಲಿಂ ಸಮಾಜದ ಹಿರಿಯರು ತಿಳಿದುಕೊಳ್ಳಬೇಕು. ದೇಶದ್ರೋಹಿ ಚಟುವಟಿಕೆ ಮಾಡಿದಾಗ ಸರ್ಕಾರ, ಪೊಲೀಸರ ಗಮನಕ್ಕೆ ತರಬೇಕು ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಈ ದೇಶಕ್ಕೆ ಇವರು ಬದ್ಧರಾಗಿರಬೇಕು. ದೇಶದ್ರೋಹ ಮಾಡುವಂತ ವಿಕೃತ ಮನಸ್ಸುಳ್ಳ ಯುವಕರನ್ನು ತಡೆಯಬೇಕು. ಇದನ್ನು ಮುಸ್ಲಿಂ ಸಮಾಜದ ಮುಖಂಡರೇ ಮಾಡಬೇಕು. ಮುಸ್ಲಿಂರು ಮಾನಸಿಕತೆ ಬದಲಾವಣೆ ಮಾಡುವ ಪ್ರಕ್ರಿಯೆ ಮದರಸಾಗಳಲ್ಲೂ ಆಗಬೇಕು ಎಂದು ಹೇಳಿದ್ದಾರೆ.