ಮಹಾರಾಷ್ಟ್ರ: ಅಯೋಧ್ಯೆಯ ರಾಮ ಮಂದಿರ ಸ್ಫೋಟಕ್ಕೆ ಪಿಎಫ್ಐ(PFI) ಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ ಬಹಿರಂಗವಾಗಿದೆ.
ಎಫ್ಐ ಜಿಹಾದಿಗಳು ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸಲು ಮತ್ತು ಅದೇ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲು ಯೋಜಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಅವರು ಯೋಜಿಸಿದ್ದರು ಎನ್ನಲಾಗಿದೆ.
ವರದಿಗಳ ಪ್ರಕಾರ, ಎಟಿಎಸ್ ಇತ್ತೀಚೆಗೆ ಮಹಾರಾಷ್ಟ್ರದ ಮಾಲೆಗಾಂವ್, ಪುಣೆ ಮತ್ತು ಇತರ ಪ್ರದೇಶಗಳಿಂದ ಐವರು ಪಿಎಫ್ಐ ಜಿಹಾದಿಗಳನ್ನು ಬಂಧಿಸಿದ್ದು, ಅವರನ್ನು ಅಕ್ಟೋಬರ್ 18 ರಂದು ನಾಸಿಕ್ ಕೋರ್ಟ್ಗೆ ಹಾಜರುಪಡಿಸಲಾಯಿತು. ಕೋಮುಗಲಭೆ ಹರಡಲು ಸಂಚು ರೂಪಿಸಿ ಭಯೋತ್ಪಾದಕರಿಗೆ ಹಣ ನೀಡಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ಮೂಲಕ ಪಿಎಫ್ಐ ಈ ಯೋಜನೆ ರೂಪಿಸಿತ್ತು. ಈ ಎಲ್ಲಾ ಪ್ಲ್ಯಾನ್ ಪಾಕಿಸ್ತಾನದಿಂದಲೇ ನಡೆದಿತ್ತು ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
BIGG NEWS: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆದರಿಕೆ ಪ್ರಕರಣ; ಸಿಐಡಿ ತನಿಖೆ ಆರಂಭ