ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಆಗುವಂತೆ ಹಿಂದೂ ಮುಖಂಡರು ಆಗ್ರಹಿಸಿದ್ದಾರೆ.
BREAKING NEWS: ಬಿಜೆಪಿ ಮುಖಂಡ ಪ್ರವೀಣ್ ಬೆಟ್ಟಾರು ಹತ್ಯೆ ಪ್ರಕರಣ; ಹಂತಕನ ಪತ್ತೆಗೆ 5 ವಿಶೇಷ ತಂಡ ರಚನೆ
ಪ್ರವೀಣ್ ಹತ್ಯೆ ಹಿಂದೆ ಪಿಎಫ್ ಐ ಅವರ ಕೈವಾಡವಿದೆ ಎಂದು ಹಿಂದೂ ಮುಖಂಡ ಅರುಣ್ ಆರೋಪಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಆದ್ರೆ ಮಾತ್ರ ಸತ್ಯಾಂಶ ಏನು ಎಂಬುದು ಹೊರಗೆ ಬರಲಿದೆ ಎಂದು ಹೇಳಿದ್ದಾರೆ .ಅಮಾಯಕ ಮೇಲೆ ದಾಳಿ ಮಾಡಿದ್ದು ಸರಿ ಇಲ್ಲ. ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು ಅಂದು ಆಗ್ರಹಿಸಿದ್ದಾರೆ.
BREAKING NEWS: ಬಿಜೆಪಿ ಮುಖಂಡ ಪ್ರವೀಣ್ ಬೆಟ್ಟಾರು ಹತ್ಯೆ ಪ್ರಕರಣ; ಹಂತಕನ ಪತ್ತೆಗೆ 5 ವಿಶೇಷ ತಂಡ ರಚನೆ
ಈಗಾಗಲೇ ಹಂತಕರ ಪತ್ತೆಗಾಗಿ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಕೇರಳ, ಮಡಿಕೇರಿ, ಹಾಸನದಲ್ಲಿ ಪೊಲೀಸರು ಮೂರು ತಂಡಗಳು ತೆರಳಿವೆ. ಇನ್ನು ಹಂತಕನ ಪತ್ತೆಗಾಗಿ ಕೇರಳಗಡಿ ಭಾಗಗಳಲ್ಲಿ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನ ತಲಾಶ್ ಮಾಡಲಾಗಿದೆ.