ನವದೆಹಲಿ: ದೇಶದಲ್ಲಿ ಪಿಎಫ್ ಐ ಸಂಘಟನೆ ಐದು ವರ್ಷ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಈಗಾಗಲೇ ವಿದೇಶದಲ್ಲಿ ಕೆಲ ಪಿಎಫ್ ಐ ಸಂಘಟನೆಯ ಸದಸ್ಯರು ತಲೆಮರೆಸಿಕೊಂಡಿದ್ದಾರೆ.
BIGG NEWS : ‘ಪಿಎಫ್ಐ’ ವಿರುದ್ಧ ಮುಂದುವರೆದ ಕಾರ್ಯಾಚರಣೆ : ಕಾರ್ಯಕರ್ತರ ಖಾತೆಯಲ್ಲಿ ಕೋಟ್ಯಾಂತರ ರೂ.ಹಣ ಪತ್ತೆ
ಬೇರೆ ಹೆಸರಿನಲ್ಲಿ ಸಂಘಟನೆ ಸಕ್ರಿಯಗೊಳಿಸುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದರು. ಇದಕ್ಕೂ ಇದೀಗ ಮಾಸ್ಟರ್ ಸ್ಟ್ರೋಕ್ ಕೊಡೋಕೆ ಕೇಂದ್ರ ತನಿಖಾ ಸಂಸ್ಥೆಗಳು ರೆಡಿಯಾಗಿದೆ. ವಿದೇಶದಲ್ಲಿರುವ ಪಿಎಫ್ ಐ ಮೇಲೆ ಕಣ್ಣಿಡಲು ಸಿದ್ಧತೆ ಮಾಡಲಾಗಿದೆ. ಪಿಎಫ್ ಐ ನ ಸದಸ್ಯರ ಆಧಾರ್ , ಪಾನ್, ಭಾವಚಿತ್ರ ಮಾಹಿತಿ ಸಂಗ್ರಹ ಮಾಡಲಾಗಿದೆ. ಹೀಗಾಗಿ ಮಾಸ್ಟರ್ ಸ್ಟ್ರೋಕ್ ಕೊಡದಕ್ಕಾಗಿ ಕೇಂದ್ರ ತನಿಖಾ ಸಂಸ್ಥೆ ರೆಡಿಯಾಗಿದೆ ಎಂದು ತಿಳಿದುಬಂದಿದೆ.
BIGG NEWS : ‘ಪಿಎಫ್ಐ’ ವಿರುದ್ಧ ಮುಂದುವರೆದ ಕಾರ್ಯಾಚರಣೆ : ಕಾರ್ಯಕರ್ತರ ಖಾತೆಯಲ್ಲಿ ಕೋಟ್ಯಾಂತರ ರೂ.ಹಣ ಪತ್ತೆ
ಇನ್ನು ಬುಧವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India – PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿತ್ತು. ಈ ಸಂಘಟನೆಗಳನ್ನು ‘ಕಾನೂನು ಬಾಹಿರ’ ಎಂದು ಘೋಷಿಸಿದ್ದು,ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದರು.