ತುಮಕೂರು : ಠಾಣೆಗೆ ಕರೆತಂದಿದ ವ್ಯಕ್ತಿ ಅನುಮಾನಾಸ್ಪದ ರೀತಿ ಸಾವನ್ನಪ್ಪಿರುವ ಘಟನೆ ತುಮಕೂರಲ್ಲಿ ನಡೆದಿದೆ. ವ್ಯಕ್ತಿಯ ಸಾವಿಗೆ ಪೊಲೀಸರೇ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದು, ಪೊಲೀಸ್ ಠಾಣೆ ಒಳಗೆ ಶವ ತಂದಿಟ್ಟು ಪ್ರತಿಭಟನೆ ನಡೆಸಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ.
ಯಳನಾಡು ಗ್ರಾಮದ ಕಾಂತರಾಜು ಎಂಬಾತ ಸಾವನಪ್ಪಿದ್ದು, ಠಾಣೆ ಎದರು ಊರಿನ ಜನರು ಜಮಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಠಾಣೆಗೆ ಕರೆ ಬಂದಾಗ ಕಾಂತರಾಜು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ. ಹಾಗಾಗಿ ಗ್ರಾಮಸ್ಥರು ಪೊಲೀಸರೇ ಕಾಂತರಾಜ್ ಸಾವಿಗೆ ಕಾರಣ ಎಂದು ಶವ ಪೊಲೀಸ್ ಠಾಣೆಯಲ್ಲಿ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.
ಜೂಜಾಟ ಕೇಸ್ನಲ್ಲಿ ಪೊಲೀಸರು ಸಂಜೆ ಕಾಂತರಾಜು ಸೇರಿದಂತೆ ಆರು ಜನರನ್ನು ಠಾಣೆಗೆ ಕರೆತಂದಿದ್ದಾರೆ. ರಾತ್ರಿ 8 ಗಂಟೆಯವರೆಗೂ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ ಈ ವೇಳೆ ಕಾಂತರಾಜ್ ಠಾಣೆಯಲ್ಲಿಯೇ ಮೃತಪಟ್ಟಿದ್ದಾರೆ. ಕಾಂತರಾಜ್ ಸಾವಿಗೆ ನೇರವಾಗಿ ಪೊಲೀಸರೇ ಕಾರಣ ಎಂದು ಕಿಡಿ ಕಾರಿದ್ದಾರೆ. ರಾತ್ರಿ 8 ಗಂಟೆ ಬಳಿಕ ಕಾಂತರಾಜು ಹೊರಗಡೆ ಕಳುಹಿಸಿದ್ದೇವೆ. ಗೇಟ್ ಬಳಿ ಕಾಂತರಾಜ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.








