ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ರಾಜ್ಯದ 125 ಗ್ರಾಮಗಳ ಸುಮಾರು 3,27,192 ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ, ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 392 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಮಂಜೂರು ಮಾಡಲಾಗಿದೆ, ಈ ಕಾರ್ಯಕ್ರಮದಿಂದ ರಾಜ್ಯದ 171 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ :
• ಬಂಟ್ವಾಳ ಮತ್ತು ಉಳ್ಳಾಲ, ದ.ಕನ್ನಡ ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳ ಸಂಖ್ಯೆ : 26
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನಸಂಖ್ಯೆ : 1,60,820
ಒಟ್ಟು ಅನುದಾನ : ₹245.00 ಕೋಟಿ
• ಅಂತರಸಂತೆ, ಹೆಚ್.ಡಿ ಕೋಟೆ ತಾಲೂಕು, ಮೈಸೂರು ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳ ಸಂಖ್ಯೆ : 64
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನಸಂಖ್ಯೆ : 67,527
ಒಟ್ಟು ಅನುದಾನ: ₹101.73 ಕೋಟಿ
• ದೊಡ್ಡೇಬಾಗಿಲು, ಟಿ.ನರಸೀಪುರ ತಾಲೂಕು, ಮೈಸೂರು ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳ ಸಂಖ್ಯೆ : 25
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನಸಂಖ್ಯೆ : 27,691
ಒಟ್ಟು ಅನುದಾನ : ₹34.00 ಕೋಟಿ
• ನೆಗಳೂರು, ಹಾವೇರಿ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳ ಸಂಖ್ಯೆ : 4
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನಸಂಖ್ಯೆ : 14,676
ಒಟ್ಟು ಅನುದಾನ : ₹18 ಕೋಟಿ
• ಹಂಪಾಪುರ, ಹೆಚ್.ಡಿ. ಕೋಟೆ ತಾಲೂಕು, ಮೈಸೂರು ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳ ಸಂಖ್ಯೆ : 36
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನಸಂಖ್ಯೆ: 41,561
ಒಟ್ಟು ಅನುದಾನ : ₹65.07 ಲಕ್ಷ
• ಕುಡ್ಲ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಗ್ರಾಮಗಳ ಸಂಖ್ಯೆ : 6
ಕುಡಿಯುವ ನೀರಿನ ಸಂಪರ್ಕ ಪಡೆಯಲಿರುವ ಜನಸಂಖ್ಯೆ : 14,917
ಒಟ್ಟು ಅನುದಾನ : ₹26.00 ಲಕ್ಷ
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರಾನೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬದ್ದವಾಗಿದ್ದು, ನಾಡಿನ ಗ್ರಾಮೀಣ ಭಾಗದ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಕಾರ್ಯೋನ್ಮುಖವಾಗಿರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Jai Shri Ram On Ambani House : ‘ಅಂಬಾನಿ ಮನೆ’ ಮೇಲೆ ರಾರಾಜಿಸಿದ ‘ಜೈ ಶ್ರೀ ರಾಮ್ ಬರಹ
Covid19 Update: ರಾಜ್ಯದಲ್ಲಿಂದು 89 ಜನರಿಗೆ ಕೊರೋನಾ, 74 ಸೋಂಕಿತರು ಗುಣಮುಖ