ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ದುರ್ಮರಣ ಹೊಂದಿರುವಂತಹ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಸಾಜಿದ್ ಪಾಷಾ ಎನ್ನುವ ಬಾಲಕ ಮೃತಾಪಟ್ಟಿದ್ದು, ಇದೀಗ 5ನೇ ಸಾವನ್ನಪ್ಪಿದ್ದಾನೆ. ವಿಕ್ಟೊರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಯಾನ್ (10) ಎನ್ನುವ ಬಾಲಕ ಸಾವನಪ್ಪಿದ್ದಾನೆ.
ಬಡವರಿಗೆ ’10’% ಮೀಸಲು ಜಾರಿ ವಿಚಾರ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಅಲ್ಲಾಭಕ್ಷ, ಅಫ್ರೋಜ್, ರಿಯಾಜ್ , ಸಾಧಿಕ್, ಇಮ್ರಾನ್ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಮೂರು ದಿನಗಳಿಂದ ಐಸಿಯುನಲ್ಲಿ ರಿಯನ್ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾಜಿದ್ ಪಾಷ ಸಾವನ್ನಪ್ಪಿದ್ದಾನೆ.
ಬಡವರಿಗೆ ’10’% ಮೀಸಲು ಜಾರಿ ವಿಚಾರ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಅಗ್ನಿ ದುರಂತ ಬಗ್ಗೆ ಕುಂಬಳಗೋಡು ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಖಾಲಿ ಜಾಗದ ಶೆಡ್ನಲ್ಲಿ ಪರ್ಫ್ಯೂಮ್ ಕೆಮಿಕಲ್ ಫಿಲ್ಲಿಂಗ್ ಮಾಡಲಾಗುತ್ತಿತ್ತು. ಒಟ್ಟು 8 ಸಿಬ್ಬಂದಿ ಕೆಮಿಕಲ್ ಫಿಲ್ಲಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಫಿಲ್ಲಿಂಗ್ ವೇಳೆ ಸ್ಫೋಟಗೊಂಡು ಇಡೀ ಮನೆಗೆ ಬೆಂಕಿ ಆವರಿಸಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿ ದುರಂತದಲ್ಲಿ 1 ಬೈಕ್, 1 ಕಾರು ಹಾಗೂ ಆಟೋ ಸಂಪೂರ್ಣ ಹಾನಿಯಾಗಿದ್ದು, ಬೆಂಕಿಯ ತೀವ್ರತೆಗೆ ಅಕ್ಕಪಕ್ಕದ ಮನೆಯ ವಸ್ತುಗಳು ಬೆಂಕಿಗಾಹುತಿ ಆಗಿದೆ.
ಗೌರವ ಡಾಕ್ಟರೇಟ್ ಹೆಸರಿನ ಮುಂದೆ ‘ಡಾ.’ ಪದ ಬಳಕೆ ನಿರ್ಬಂಧಿಸಿದ ರಾಜ್ಯ ಸರ್ಕಾರ
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಕೆಮಿಕಲ್ ಸ್ಫೋಟಗೊಂಡ ಪರಿಣಾಮ ಆಕಸ್ಮಿಕ ಬೆಂಕಿಯಿಂದ ಪರ್ಫ್ಯೂಮ್ ಫ್ಯಾಕ್ಟರಿ ಹೊತ್ತಿ ಉರಿದಿತ್ತು. ಈ ಘಟನೆಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಜೀವದಹನವಾಗಿದ್ದರು. ಇದೀಗ ಮತ್ತೊಬ್ಬ ಬಾಲಕ ಸಾವನ್ನಪ್ಪಿದ್ದಾನೆ.