ಕೆಎನ್ ಎನ್ ನ್ಯೂಸ್ ಡೆಸ್ಕ್ : ಹಳ್ಳಿ ಕಡೆ ಮನೆಯ ಹಿಂದೆ ಪಪ್ಪಾಯಿ ಗಿಡವನ್ನ ಹಾಕಿಕೊಂಡಿರುತ್ತಾರೆ. ಅದು ತಿನ್ನಲು ಇದು ತುಂಬಾ ರುಚಿ. ಆದರೆ ಅದರಲ್ಲಿ ಉಷ್ಣಾಂಶ ಜಾಸ್ತಿ ಇರುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಜಾಸ್ತಿ ತಿನ್ನಬಾರದು ಎಂದು ಹೇಳುತ್ತಾರೆ. ಹಾಗಾದರೆ ಯಾರು ಈ ಹಣ್ಣಿನಿಂದ ದೂರ ಇರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.ಕಣ್ಣಿನ ತೊಂದರೆಗೆ ಈ ಹಣ್ಣು ಒಳ್ಳೆಯದಾಗಿರುತ್ತದೆ.
* ಗರ್ಭಿಣಿ ಮಹಿಳೆಯರು ಹೆಚ್ಚು ತಿನ್ನಬಾರದು. ಅವರು ಒಳ್ಳೆಯ ಆಹಾರ ಸೇವನೆ ಮಾಡಬೇಕು. ಏಕೆಂದರೆ ಇದು ಅವಧಿಪೂರ್ವ ಹೆರಿಗೆಗೆ ಕಾರಣವಾಗಿ ಬಿಡುತ್ತದೆ
* ಪರಂಗಿ ಹಣ್ಣು ಹೃದಯಕ್ಕೆ ಒಳ್ಳೆಯದು. ಆದರೆ ಹೃದಯ ಬಡಿತ ಚೆನ್ನಾಗಿ ಇಲ್ಲದೆ ಇರುವವರು ಪರಂಗಿ ಹಣ್ಣು ತಿನ್ನಬಾರದು.
* ಹೈಪೋಥೈರಾಯ್ಡಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಇದು ಆಗಿಬರುವುದಿಲ್ಲ.
* ಇದರಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಇದೆ. ಇದರಿಂದ ಇದು ಒಳ್ಳೆಯ ಆಂಟಿ ಆಕ್ಸಿಡೆಂಟ್ ಅಂಶವನ್ನು ಒಳಗೊಂಡ ಹಣ್ಣು ಎಂದು ಕರೆಸಿಕೊಳ್ಳುತ್ತದೆ.
* ಇದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ದೇಹ ಸೇರಿದರೆ ಕಿಡ್ನಿಯಲ್ಲಿ ಕಲ್ಲುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
* ರಕ್ತದಲ್ಲಿ ಸಕ್ಕರೆ ಪ್ರಮಾಣ ತುಂಬಾ ಕಡಿಮೆ ಇರುವವರು ಈ ಹಣ್ಣು ತಿನ್ನಬಾರದು.