ಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರಣಿ ಅವರು ಪ್ರತಿಕ್ರಿಯೆ ನೀಡಿದ್ದು, ಜನರು ತಿಂಗಳಾನುಗಟ್ಟಲೆ ಓಡಾಡಿದರು ವೀಸಾ ಸಿಗುವುದಿಲ್ಲ ಆದರೆ ಪ್ರಜ್ವಲ್ ರೇವಣ್ಣ ಅವರಿಗೆ ಒಂದೇ ದಿನದಲ್ಲಿ ಹೇಗೆ ವೀಸಾ ಸಿಕ್ಕಿತು ಎಂದು ಪ್ರಶ್ನಿಸಿದರು.
ಹಾವೇರಿಯಲ್ಲಿ ಈ ಕುರಿತಂತೆ ಮಾತನಾಡಿದ ಅವರು, ಜರ್ಮನಿಗೆ ಹೋಗಲು ಒಂದೇ ದಿನದಲ್ಲಿ ಹೇಗೆ ವೀಸಾ ಸಿಕ್ಕಿತು? ಜನರು ತಿಂಗಳುಗಟ್ಟಲೆ ಓಡಾಡಿದರೂ ವೀಸಾ ಸಿಗುವುದಿಲ್ಲ. ಆದರೆ ಪ್ರಜ್ವಲ್ ರೇವಣ್ಣಗೆ ಹೇಗೆ ಒಂದೇ ದಿನದಲ್ಲಿ ವೀಸಾ ಸಿಕ್ಕಿತು? ಈ ವಿಚಾರವನ್ನು ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಹೇಳಿಕೆ ನೀಡಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕಾರ ಕಾಂಗ್ರೆಸ್ ಜೆಡಿಎಸ್ ನಾಯಕರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಯಾರ ಮೇಲೆ ಯಾರು ಬೇಕಾದರೂ ಆರೋಪ ಮಾಡಬಹುದು. ಆ ಕೃತ್ಯ ಆಗಿದ್ದು ನಿಜ ಅಲ್ವಾ? ಆ ಹೆಣ್ಣು ಮಕ್ಕಳ ಪರಿಸ್ಥಿತಿ ಏನು? ಸಮಾಜದಲ್ಲಿ ಮಹಿಳೆಯರು ತಲೆ ಎತ್ತಿ ತಿರುಗಾಡದಂತೆ ಆಗಿದೆ. ಆ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಲಿ ಅಷ್ಟೇ ಎಂದರು.