ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೂರುದ ಸ್ಥಳಗಳಿಗೆ ತೆರಳಲು ರೈಲಿನ ಪ್ರಯಾಣ ಉತ್ತಮ. ಕಡಿಮೆ ವೆಚ್ಚ, ಆರಾಮದಾಯಕವಾಗಿರುತ್ತದೆ. ಕೆಲವೊಮ್ಮೆ ಜನರು ಟಿಕೆಟ್ ಇಲ್ಲದೆ ಅನೇಕರು ಪ್ರಯಾಣ ಮಾಡುತ್ತಾರೆ. ಕೆಲವೊಮ್ಮೆ ಸಿಕ್ಕಿ ಬೀಳುತ್ತಾರೆ. ಆದರೆ ನಾವಿಂದು ನಿಮಗೆ ಹೇಳ ಹೊರಟಿರುವ ವಿಷಯ ನಿಮ್ಮನ್ನು ಅಚ್ಚರಿ ಮೂಡಿಸಬಹುದು.
ನಾವಿಂದೂ ವಿಶೇಷವಾದ ರೈಲಿನ ಬಗ್ಗೆ ಹೇಳುತ್ತಿದ್ದೇವೆ. ಈ ರೈಲಿನಲ್ಲಿ ಪ್ರಯಾಣ ಮಾಡಲು ಯಾವುದೆ ಟಿಕೆಟ್ ಅವಶ್ಯಕತೆಯಿಲ್ಲ. ಈ ರೈಲಿನಲ್ಲಿ ಯಾವುದೆ ಟಿಟಿಇ ಇರುವುದಿಲ್ಲ. ಭಾರತದಲ್ಲಿದೆ ಉಚಿತ ರೈಲು. ಇದು ಕಳೆದ 75 ವರ್ಷಗಳಿಂದ ಓಡಾಡುತ್ತಿದೆ.
ಉಚಿತ ರೈಲು
ಭಾರತದ ಈ ಉಚಿತ ರೈಲು ಇಂದಿನಿಂದಲ್ಲ ಸುಮಾರು 75 ವರ್ಷಗಳಿಂದ ಜನರನ್ನು ಉಚಿತವಾಗಿ ಪ್ರಯಾಣಿಸುತ್ತಿದೆ. ಈ ರೈಲು ಪಂಜಾಬ್ ಮತ್ತು ಹಿಮಾಚಲದ ಗಡಿಯಲ್ಲಿ ಚಲಿಸುತ್ತದೆ. ಭಾಕ್ರಾ-ನಂಗಲ್ ರೈಲು ಎಂದು ಪ್ರಸಿದ್ಧವಾಗಿದೆ. ಈ ರೈಲು ಭಾಕ್ರಾ ಮತ್ತು ನಂಗಲ್ ನಡುವೆ ಚಲಿಸುತ್ತದೆ. ಭಾಕ್ರಾ-ನಂಗಲ್ ಅಣೆಕಟ್ಟನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಬಂದಾಗ ಅವರು ಈ ರೈಲನ್ನು ಬಳಸುತ್ತಾರೆ. ಈ ರೈಲಿನಲ್ಲಿ ಪ್ರಯಾಣ ಮಾಡಲು ಪ್ರವಾಸಿಗರಿಗೆ ಯಾವುದೇ ಟಿಕೆಟ್ ಅನ್ನು ಬೇಕಿಲ್ಲ.
ರೈಲಿನ ಇತಿಹಾಸ
ಈ ರೈಲಿನ ಇತಿಹಾಸದ ಬಗ್ಗೆ ಹೇಳುವುದಾದರೆ, ಇದನ್ನು 1948 ರಲ್ಲಿ ಪ್ರಾರಂಭಿಸಲಾಯಿತು. ಈ ರೈಲಿನ ಕೋಚ್ಗಳು ಮರದಿಂದ ಮಾಡಲ್ಪಟ್ಟಿದೆ., ಈ ರೈಲು ಪ್ರಾರಂಭವಾದಾಗ 10 ಬೋಗಿಗಳನ್ನು ಹೊಂದಿತ್ತು. ಆದರೆ ಈಗ ಕೇವಲ 3 ಬೋಗಿಗಳನ್ನು ಹೊಂದಿದೆ. ಪ್ರತಿದಿನ ಸುಮಾರು 800 ಜನರು ಅದರಲ್ಲಿ ಪ್ರಯಾಣಿಸುತ್ತಾರೆ.
ಈ ರೈಲನ್ನು ದೇಶದ ಪರಂಪರೆ ಮತ್ತು ಸಂಪ್ರದಾಯದಂತೆ ನೋಡಲಾಗುತ್ತದೆ. 2011 ರಲ್ಲಿ, ಆರ್ಥಿಕ ನಷ್ಟದ ದೃಷ್ಟಿಯಿಂದ ಅದರ ಉಚಿತ ಸೇವೆಯನ್ನು ನಿಲ್ಲಿಸಲು ನಿರ್ಧರಿಸಲಾಯಿತು. ಆದರೆ ನಂತರ ಅದನ್ನು ಹಿಂತೆಗೆದುಕೊಳ್ಳಲಾಯಿತು. ಮ ಈ ರೈಲನ್ನು ಜನರಿಗೆ ಉಚಿತವಾಗಿ ಇಡಲಾಯಿತು.
‘ಮೆಕ್ ಡೊನಾಲ್ಡ್ಸ್’ನ ನೂತನ ರಾಯಭಾರಿದ ‘ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್’
ಧರ್ಮ ಒಡೆಯಲು ಮುಂದಾದವರ ಬಾಯಿಂದ ಮತ್ತೇನು ನಿರೀಕ್ಷೆ ಸಾಧ್ಯ: ಸಿದ್ದು ವಿರುದ್ಧ ಶಾಸಕ ತೇಲ್ಕೂರ ಆಕ್ರೋಶ