ತಿರುವನಂತಪುರಂ: ಐದು ದಿನಗಳ ಹಿಂದೆ ಆಟೋ ಚಾಲಕ ಅನೂಪ್ ಕೇರಳ ಸರ್ಕಾರದ 25 ಕೋಟಿ ರೂ.ಗಳ ತಿರುವೋಣಂ ಬಂಪರ್ ಲಾಟರಿಯಲ್ಲಿ ಗೆದ್ದಾಗ ಅವರ ಜೀವನ ಬದಲಾಗಿದೆ. ರಾತ್ರಿ ತೆಗೆದುಕೊಂಡ ಲಾಟರಿ ಟಿಕೆಟ್ ಬೆಳಕು ಮೂಡುವುರಲ್ಲಿ ಜಾಕ್ ಪಾಟ್ ಹೊಡಿದಿದೆ. ಆದರೆ ಈಗ ಈಗ, ಜನರು, ತಿರುವನಂತಪುರಂನಲ್ಲಿರುವ ಅನೂಪ್ ಅವರ ಮನೆಗೆ ಬಳಿಗೆ ಬಂದು ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿರುವುದು ಆತನ ತಲೆ ಬಿಸಿ ಮಾಡಿದೆ. ಈ ಬಗ್ಗೆ ಆತ ಹೇಳಿಕೊಂಡಿದ್ದು, “ನಾನು ಇನ್ನೂ ಹಣವನ್ನು ಪಡೆದಿಲ್ಲ. ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಅನೂಪ್ ಹೇಳಿಕೊಂಡಿದ್ದು, ಸಹಾಯಕ್ಕಾಗಿ ತಮ್ಮ ಬಾಗಿಲು ತಟ್ಟುವವರಿಗೆ ದೂರ ಇರುವಂತೆ ಮನವಿ ಮಾಡುತ್ತಿದ್ದಾರೆ.
“ನಾವು ನಮ್ಮ ಸ್ವಂತ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದೇವೆ. ನಾವು ಹೊರಗೆ ಹೋಗಲು ಅಥವಾ ಎಲ್ಲಿಯೂ ಹೋಗಲು ಸಾಧ್ಯವಿಲ್ಲ, ನಾವು ಹೋದಲ್ಲೆಲ್ಲಾ ಜನರು ನಮ್ಮನ್ನು ಸುತ್ತುವರೆಯುತ್ತಿದ್ದಾರೆ. ನಮ್ಮ ತುಂಬಾ ಪರಿಸ್ಥೀತಿ ಭೀಕರವಾಗಿದೆ, ನಾವು ಬೇರೆ ಮನೆಗೆ ಬದಲಾಯಿಸಲು ಯೋಚಿಸುತ್ತಿದ್ದೇವೆ” ಎಂದು ಆತ ಹೇಳಿಕೊಂಡಿದ್ದಾನೆ. ಉಸಿರಾಟದ ತೊಂದರೆಯಿಂದ ಕಳೆದ ಹಲವು ತಿಂಗಳಿಂದ ಕೆಲಸಕ್ಕೆ ಹೋಗದ ಅನೂಪ್, ಹಣ ಸಿಕ್ಕರೂ ಫಿಕ್ಸೆಡ್ ಡೆಪಾಸಿಟ್ ಮಾತ್ರ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
“ನಾನೊಬ್ಬ ಸಿಂಪಲ್ ಮ್ಯಾನ್. ನನಗೆ ತೆರಿಗೆ ಹೇಗೆ ಕೆಲಸ ಮಾಡುತ್ತದೆ ಅಥವಾ ನನಗೆ ಬಂದಿರುವ ಹಣವನ್ನು ಹೇಗೆ ನಿರ್ವಹಿಸುವುದು ಎಂದು ನನಗೆ ತಿಳಿದಿಲ್ಲ. ನಾನು ವೃತ್ತಿಪರರ ಸಲಹೆಯ ಮೇರೆಗೆ ಮಾತ್ರ ಹೋಗುತ್ತೇನೆ. ಸದ್ಯಕ್ಕೆ ನಾನು ಅದನ್ನು ಫಿಕ್ಸೆಡ್ ಡೆಪಾಸಿಟ್ ಮಾಡಲು ನಿರ್ಧರಿಸಿದ್ದೇನೆ” ಎಂದು ಅನೂಪ್ ಹೇಳಿದ್ದಾರೆ.