ಬೆಳಗಾವಿ : ಬೆಳಗಾವಿ ಗಡಿ ವಿವಾದದ ಕುರಿತು ಇಂದು ಸದನದಲ್ಲಿ ಚರ್ಚೆಯಾಗಿದ್ದು, ಎರಡೂ ರಾಜ್ಯದ ರಾಜಕೀಯ ಮುಖಂಡರು ಸಂಯಮ ತೋರಬೇಕು ಎಂದು ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಗೃಹ ಸಚಿವರು ಸರ್ಕಾರ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದ ರೀತಿ ನೋಡಿಕೊಳ್ಳಬೇಕು, ಜನ ಸಾಮಾನ್ಯರ ನೆಮ್ಮದಿಗೆ ಬೆಂಕಿ ಇಡುವ ಹೇಳಿಕೆಯನ್ನ ನೀಡಬಾರದು. ಮಹಾರಾಷ್ಟ್ರ ಸಿಎಂ, ನಮ್ಮ ಸಿಎಂ ಜೊತೆ ಅಮಿತ್ ಶಾ ಸಭೆ ನಡೆಸಿದ್ದಾರೆ ಎಂದರು.
ಮೈಸೂರು ಚೆನ್ನೈ ವಂದೇ ಭಾರತ್ ರೈಲಿನ ಸಮಯ ಬದಲಾಯಿಸುವಂತೆ ಮರಿತಿಬ್ಬೇಗೌಡ ಸದನದಲ್ಲಿ ಪ್ರಸ್ತಾಪಿಸಿದರು. ಜನಶತಾಬ್ದಿ ಹಾಗೂ ವಂದೇ ಭಾರತ್ ಟ್ರೇನ್ ಸಮಯ ಕೇವಲ ಅರ್ಧ ಗಂಟೆ ವ್ಯತ್ಯಾಸ ಇದೆ. ಇದನ್ನು ಬದಲಾಯಿಸುವಂತೆ ಅವರು ಮನವಿ ಮಾಡಿದರು. ಮಂಡ್ಯದಲ್ಲಿಯೂ ಜನಶತಾಬ್ದಿ ಹಾಗೂ ವಂದೇ ಭಾರತ್ಗೆ ನಿಲುಗಡೆ ನೀಡುವಂತೆ ಒತ್ತಾಯಿಸಲಾಯಿತು. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಆಗ್ರಹಿಸಿದರು. ಕುಲಪತಿ ನೇಮಕಕ್ಕೆ 5-6 ಕೋಟಿ ಕೊಡಬೇಕು ಎಂದು ಬಿಜೆಪಿಯ ಜನಪ್ರತಿನಿಧಿಯೇ ಗಂಭೀರ ಆರೋಪ ಮಾಡಿದ್ದಾರೆ. ಇದರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಹರಿಪಸ್ರಾದ್ ಹೇಳಿದರು. ಇದಕ್ಕೆ ನೋಟಿಸ್ ಕೊಡಿ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸಭಾಪತಿ ತಿಳಿಸಿದರು.
ಮಂಗಳೂರು ಸ್ಪೋಟ : ಆಟೋ ಚಾಲಕನಿಗೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ
ಮೈಸೂರು-ಚೆನ್ನೈ ವಂದೇ ಭಾರತ್ ರೈಲಿನ ಸಮಯ ಬದಲಾಯಿಸುವಂತೆ ಒತ್ತಾಯ |Karnataka Assembly Session