ಬೀದರ್ : ರಾಜ್ಯದ ಜನರೇ ಎಚ್ಚರ, ಇನ್ಮುಂದೆ ರಾಜ್ಯದಲ್ಲಿ ಅನಮತಿ ಇಲ್ಲದೇ ಮರ ಕಡಿದ್ರೆ ದಂಡದ ಜೊತೆಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಪರಿಸರ ದಿನಾಚರಣೆ-2024 ಹಿನ್ನಲೆಯಲ್ಲಿ ಇಂದು ಭಾಲ್ಕಿಯಲ್ಲಿ ಪೂಜ್ಯ ಡಾ. ಬಸವಲಿಂಗ ಪಟ್ಟದೇವರ ದಿವ್ಯ ಸಾನಿಧ್ಯದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವರು, ರಾಜ್ಯದ ಅರಣೈ, ಗೋಮಾಳ, ಸರ್ಕಾರಿ ಭೂಮಿ ಹಾಗೂ ಪಟ್ಟಾ ಭೂಮಿಯಲ್ಲಿ ಬೃಹತ್ ಮರಗಳ ಅಕ್ರಮ ಕಡಿತಲೆ ಪ್ರಕರಣಗಳು ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವೃಕ್ಷ ಸಂರಕ್ಷಣಾ ಕಾಯ್ದೆ ೧೯೭೬ ಕ್ಕೆ ತಿದ್ದುಪಡಿ ತರಲು ಚಿಂತನ ನಡೆದಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ “ಹಸಿರು ಹೊದಿಕೆಯ ಕ್ರಾಂತಿ” ಮಾಡುವ ಮಹದುದ್ದೇಶದಿಂದ ಕಳೆದ 2023-24ನೇ ಸಾಲಿನಲ್ಲಿ ಸುಮಾರು 5.40 ಕೋಟಿ ನೆಟ್ಟು ಪೋಷಿಸಲಾಗಿದೆ ಈ ವರ್ಷವೂ ಸಹ ರಾಜ್ಯಾದ್ಯಂತ ಸುಮಾರು 7 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದರು.