ಬೆಂಗಳೂರು: ನಗರದ ಬೆಂಗಳೂರು ವಿಶ್ವವಿದ್ಯಾಲಯ ಆವರಣವನ್ನು ಸ್ವಚ್ಛವಾಗಿ ಇಡೋದಕ್ಕೆ ವಿವಿ ನಿರ್ಧರಿಸಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ವಿವಿ ಆವರಣದಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾವರು ಕಸ ಹಾಕಿದ್ರೇ ದಂಡ ಹಾಕೋದಕ್ಕೆ ನಿರ್ಧಾರವನ್ನು ಕೈಗೊಂಡಿದೆ.
ಈ ಕುರಿತಂತೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ವಿವಿಯ ಆವರಣವನ್ನು ಕಸ ಮುಕ್ತವಾಗಿಸಲು ನಿರ್ಧಾರ ಕೈಗೊಳ್ಳಲಾಗದೆ. ಕಸ ಮತ್ತು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ಬೆಂಗಳೂರು ವಿವಿ ಆವರಣದೊಳಗಿನ ರಸ್ತೆಯಲ್ಲಿ ಓಡಾಡುವಂತ ಸಾರ್ವಜನಿಕರು, ವಾಹನ ಸವಾರರು ಕಸವನ್ನು ಹಾಕುವುದು ಕಂಡು ಬಂದಿದೆ. ಇನ್ಮುಂದೆ ಇದನ್ನು ನಿಯಂತ್ರಣ ಮಾಡೋ ಸಂಬಂಧ ಕಸ ಹಾಕೋರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ ಅಂತ ತಿಳಿಸಿದೆ.
ಬೆಂಗಳೂರು ವಿವಿ ಆವರಣದಲ್ಲಿ ಸಾರ್ವಜನಿಕರು, ವಾಹನ ಸವಾರರು ಕಸ ಹಾಕಿದರೇ ಸ್ಥಳದಲ್ಲೇ ದಂಡವನ್ನು ವಿಧಿಸಲಾಗುತ್ತದೆ. ಒಂದು ವೇಳೆ ಇದನ್ನು ಮುಂದುವರೆಸಿದರೇ, ಅಂತವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಬೆಂಗಳೂರು ವಿವಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
BREAKING: ನಾಳೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕರೆದಿದ್ದ ‘ಡಿನ್ನರ್ ಮೀಟಿಂಗ್’ ರದ್ದು
BREAKING: ಮಣ್ಣಲ್ಲಿ ಮಣ್ಣಾದ ಸಾಹಿತಿ ನಾ.ಡಿಸೋಜ: ಮಲೆನಾಡಿನ ನಾಡಿ ಮಿಡಿತ ಇನ್ನೂ ನೆನಪು ಮಾತ್ರ