ಬೆಂಗಳೂರು: ನಗರದಲ್ಲಿ ಓಲಾ, ಉಬರ್, ರ್ಯಾಪಿಡೋ ಸಂಸ್ಥೆಗೆಳ ಆಟೋ ರಿಕ್ಷಾ ಸೇವೆಗಳನ್ನು ಕಾನೂನು ಬಾಹಿರ ಎಂದು ಸಾರಿಗೆ ಇಲಾಖೆ ಘೋಷಿಸಿದೆ. ಮೂರು ದಿನಗಳೊಳಗೆ ಇವುಗಳ ಸೇವೆಯನ್ನು ನಿಲ್ಲಿಸಬೇಕು ಎಂದು ಸಂಬಂಧಿಸಿದ ಕಂಪನಿಗಳಿಗೆ ಸೂಚಿಸಲಾಗಿದೆ.
BIGG NEWS: ಬೀದರ್ನಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ: ಆರಗ ಜ್ಞಾನೇಂದ್ರ
ಈ ಸಂಬಂಧ ಕಂಪನಿಗಳ ವಿವರಣೆಯನ್ನು ನೀಡಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಓಲಾ ಮತ್ತು ಉಬರ್ ತಮ್ಮ ಆಟೋ ರಿಕ್ಷಾ ಸೇವೆಯಲ್ಲಿ ರೆಡು ಕಿಲೋಮೀಟರ್ ಗಿಂತಲೂ ಹತ್ತಿರದಪ್ರಯಾಣಕ್ಕೂ ಕನಿಷ್ಠ ನೂರು ರೂಪಾಯಿಗಳನ್ನು ವಿಧಿಸುತ್ತಿರುವ ಬಗ್ಗೆ ಹಲವಾರು ಪರಯಾಣಿಕರು ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಜರುಗಿಸಿದೆ. ಬೆಂಗಳೂರಿನಲ್ಲಿ ಒದಲ ಎರಡು ಕಿ.ಮಿ ಗೆ ಆಟೋ ಪ್ರಯಾಣದ ಕನಿಷ್ಠ ದರ ಮೂವತ್ತು ರೂಪಯಿಗಳಿದ್ದರೆ , ಎರಡು ಕಿ.ಮೀಗೆ ಹದಿನೈದು ದರವಿದೆ.