ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಹೀಗಾಗಿ ಯೆಲ್ಲೋ ಅಲರ್ಟ್ಘೋಷಣೆ ಮಾಡಲಾಗಿದೆ.
BIGG NEWS: ದಾವಣಗೆರೆಯಲ್ಲಿ ಮಳೆ ಅಬ್ಬರಕ್ಕೆ ತತ್ತರಿಸಿದ ಜನ; ಮುಸ್ಟೂರಿನಲ್ಲಿ ಮನೆ ಕುಸಿತದಿಂದ ವೃದ್ಧ ದಂಪತಿಗೆ ಗಾಯ
ಮಳೆಯ ಅಬ್ಬರಕ್ಕೆ ಜನರು ರೋಸಿ ಹೋಗಿದ್ದಾರೆ. ನಗರದಲ್ಲಿ ಕಳೆದ ಎರಡುದಿನಗಳಿಂದ ಸುರಿಯುತ್ತಿರುವ ಮಳೆಗೆ ಅವಾಂತರ ನಿಂತಿಲ್ಲ. ಮಳೆಯಿಂದ ಪ್ರವಾಹ ಹೆಚ್ಚಾಗಿದ್ದು ಕೆಲ ಏರಿಯಾಗಳಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಜನರು ಹೊರಗೆ ಬರುವುದಕ್ಕೆ ಯೋಚನೆ ಮಾಡುತ್ತದ್ದಾರೆ. ರಸ್ತೆಗಳೆಲ್ಲ ಕೆರೆಯಂತಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ . ಇದರಿಂದ ನಿವಾಸಿಗಳು ಹೈರಾಣಾಗಿದ್ದಾರೆ.