ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರಿನ ಸಮಸ್ಯೆ ಬಗೆಹರಿಯವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಜಿಲ್ಲೆಯ ಸಿಂಧನೂರು ತಾಲೂಕಿನ ಕಲುಷಿತ ನೀರು ಸೇವಿಸಿ ಜನರು ಹೈರಾಣು ಆಗಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಚರ್ಮದ ಸಮಸ್ಯೆ ,ಅಲರ್ಜಿ ಸಮಸ್ಯೆ ಉಂಟಾಗುತ್ತಿದೆ.
ಇಂತಹ ತುರಿಕೆಗೆ ಜನರು ಹೈರಾಣಾಗಿದ್ದಾರೆ. ಕೆರೆಯ ಕಲುಷಿತ ನೀರು ಕುಡಿಯಲು ಬಳಕೆ ಮಾಡುತ್ತಿದ್ದು,ಅದರದಲ್ಲೂ ಸ್ನಾಹ, ಅಡುಗೆ ಬಳಸುತ್ತಿದ್ದೀವಿ.ಹೀಗೆ ಇದ್ದರೂ ಜನಪ್ರತಿನಿಧಿ ಮಾತ್ರ ಇತ್ತ ಸುಳಿಯುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೀರಿನಿಂದ ಮಕ್ಕಳು ತುರಿಕೆ ತಾಳಲಾರದೆ ಗೋಳಾಡುತ್ತಿದ್ದಾರೆ. ಸದ್ಯ ಸುಮಾರು 30 ಕ್ಕೂ ಹೆಚ್ಚು ಜನರಿಗೆ ಅಲರ್ಜಿ ಕಾಣಸಿಕೊಂಡಿದೆ.ಇದೀಗ ಗ್ರಾಮಸ್ಥರು ಅಧಿಕಾರಿಗಳು, ಪನಪ್ರತಿನಿಧಿನಗಳ ವಿರುದ್ಧ ಆಕ್ರೋಶ ಹೊರಗೆ ಹಾಕಿದ್ದಾರೆ.