ಹುಬ್ಬಳ್ಳಿ : ಬಿಜೆಪಿಯವರು ಗಲಾಟೆ ಗಲಬೆ ಮಾಡಿಸೋರೆಂದು ಪರೋಕ್ಷವಾಗಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣೆ ಬಂದರೆ ಸಾಕು ಬಿಜೆಪಿಯವರ ಆಟ ಆರಂಭವಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇವರ ಉದ್ಯೋಗ ಏನಂದರೆ ಗಲಾಟೆ ಗಲಬೆ ಭಾವನಾತ್ಮಕವಾಗಿ ಮತ ಕೇಳುವುದು.ಎಂದು ಹುಬ್ಬಳ್ಳಿಯಲ್ಲಿ ಅಬಕಾರಿ ಇಲಾಖೆಯ ಸಚಿವ ಆರ್ ಬಿ ತಿಮ್ಮಾಪುರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು ಇವರೇ.ಜಾತಿ ಧರ್ಮಗಳನ್ನು ನಾವು ವಿಭಾಗ ಮಾಡಿದ್ದೇವ? ಬಿಜೆಪಿಯದ್ದು ಬರೀ ಸರ್ಕಾರ ಬೀಳಿಸುವ ದಂಧೆ. ಜನ ಬಹುಮತ ನೀಡಿಲ್ಲವೆಂದು ಅಡ್ಡದಾರಿ ಮೂಲಕವೇ ಅವರು ಅಧಿಕಾರಕ್ಕೆ ಬಂದಿದ್ದು ಎಂದು ವಾಗ್ದಾಳಿ ನಡೆಸಿದರು.