ಕೆಎನ್ ಎನ್ ಡಿಜಿಟಲ್ ನ್ಯೂಸ್ : ಇಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಇರಬೇಕು ಎಂದರೆ ಆಹಾರ ಜೊತೆಗೆ ನಿದ್ದೆ ಕೂಡ ಇರಬೇಕು. ಪ್ರತಿನಿತ್ಯ ಎಂಟು ತಾಸು ನಿದ್ದೆ ಇರಲೇಬೇಕು.
BIGG NEWS : ಬೆಳಗಾವಿಯಲ್ಲಿ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥ : ಆಸ್ಪತ್ರೆಗಳಿಗಾಗಿ ಪರದಾಟ
ಆದರೆ ಇಂದಿನ ದಿನದಲ್ಲಿ ಒತ್ತಡ ಜೀವನದಲ್ಲಿ ನಿದ್ದೆ ಸರಿಯಾಗುತ್ತಿಲ್ಲ. ಇದರಿಂದಾಗಿ ನಾನಾ ಸಮಸ್ಯೆ ಎದುರಾಗುತ್ತಿದೆ. ಇನ್ನೂ ಕೆಲವರಿಗೆ ಮೊಬೈಲ್, ಲ್ಯಾಪ್ಟಾಪ್ ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ. ಇಂಥವರಿಗೆ ಅಧ್ಯಯನವೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು.
BIGG NEWS : ಬೆಳಗಾವಿಯಲ್ಲಿ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥ : ಆಸ್ಪತ್ರೆಗಳಿಗಾಗಿ ಪರದಾಟ
50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ ಮಧುಮೇಹ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳು ಎದುರಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.ಈಚೆಗೆ ಪೀರ್-ರಿವ್ಯೂಡ್ ಜರ್ನಲ್ PLOS ಮೆಡಿಸಿನ್ನಲ್ಲಿ ತಮ್ಮ ಸಂಶೋಧನೆಗಳನ್ನು ಸಂಶೋಧಕರ ತಂಡವು ಪ್ರಕಟಿಸಿದೆ. 50, 60 ಮತ್ತು 70 ವರ್ಷ ವಯಸ್ಸಿನ 7,864 ಬ್ರಿಟಿಷ್ ನಾಗರಿಕ ಸೇವಕರ ಡೇಟಾವನ್ನು ಸಂಶೋಧಕರ ತಂಡವು ವಿಶ್ಲೇಷಿಸಿದೆ.ಸಂಶೋಧನೆಗಳ ಪ್ರಕಾರ, 50ನೇ ವಯಸ್ಸಿನಲ್ಲಿ ಐದು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಅವಧಿ ನಿದ್ರೆ ಮಾಡುವವರಲ್ಲಿ ದೀರ್ಘಕಾಲದ ಕಾಯಿಲೆಗಳು ಶೇ.20 ವೃದ್ಧಿಯಾಗುತ್ತದೆ.