ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ 2024ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಹೊತ್ತಿನಲ್ಲಿ 85 ವರ್ಷ ಮೇಲ್ಪಟ್ಟವರಿಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.
ದೆಹಲಿಯ ವಿಜ್ಞಾನ ಭವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮುಖ್ಯ ಚುನಾವಣಾ ಆಯುಗ್ತ ರಾಜೀವ್ ಕುಮಾರ್ ಅವರು, ನಾವು ಲೋಕಸಭಾ ಚುನಾವಣೆ ಸಂಪೂರ್ಣ ತಯಾರಿ ನಡೆಸಲಾಗಿದೆ. ಚುನಾವಣೆ ಒಂದು ಯುದ್ಧವಿದ್ದಂತೆ. ಜಮ್ಮು ಕಾಶ್ಮೀರ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆ ಬಾಕಿಯಿದೆ. 800 ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಲೋಕಸಭಾ ಚುನಾವಣೆಗಾಗಿ ಚರ್ಚೆ ನಡೆಸಲಾಗಿದೆ. ಪೊಲೀಸ್, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೊಂದಿಗೂ ಸಮೀಕ್ಷೆ ನಡೆಸಿ, ಚರ್ಚಿಸಲಾಗಿದೆ ಎಂದರು.
ನಾವು ಸ್ವತಂತ್ರ್ಯ, ನಿಷ್ಪಕ್ಷ ಪಾತ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಭೌಗೋಳಿಕ, ಸಾಂಸ್ಕೃತಿಕ ವೈವಿದ್ಯತೆ ಹೊಂದಿರುವಂತ ಭಾರತದಲ್ಲಿ ಚುನಾವಣೆ ಒಂದು ಸವಾಲಿನ ಸಂಗತಿಯಾಗಿದೆ. 97 ಕೋಟಿ ಜನರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಾರೆ. 10.5 ಲಕ್ಷ ಪೋಲಿಂಗ್ ಭೂತ್ ಗಳನ್ನು ನಿರ್ಮಿಸಲಾಗುತ್ತಿದೆ. 1.5 ಕೋಟಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.
ಕಳೆದ ಕೆಲ ದಿನಗಳ ಹಿಂದೆ 11 ರಾಜ್ಯಗಳ ಚುನಾವಣೆ ನಡೆಸಾಯಿತು. ಶಾಂತಿಯುತವಾಗಿ ಚುನಾವಣೆ ನಡೆಸಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸಕಲ ಸಿದ್ಧತೆಯೊಂದಿಗೆ ನಡೆಸೋದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಎಲ್ಲಾ ಸಿದ್ಧತೆ ಮುಕ್ತಾಯಗೊಂಡಿದೆ ಎಂದರು.