ಬೆಳಗಾವಿ : ಮುಂದಿನ ದಿನಗಳಲ್ಲಿ ಆರ್ಥಿಕತೆ ಸುಧಾರಿಸಿದರೆ ಗ್ರಾಮ ಪಂಚಾಯತಿ ಸದಸ್ಯರಿಗೂ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ನಿನ್ನೆ ವಿಧಾನಪರಿಷತ್ ನಲ್ಲಿ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಈಗಾಗಲೇ ಗೌರವ ಧನ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆ ಸುಧಾರಿಸಿದರೆ ಗ್ರಾಮ ಪಂಚಾಯತಿ ಸದಸ್ಯರಿಗೂ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರವಧನ ಹೆಚ್ಚಳ
ರಾಜ್ಯ ಸರ್ಕಾರದಿಂದ ( Karnataka Government ) ಎಲ್ಲಾ ಗ್ರಾಮ ಪಂಚಾಯ್ತಿಗಳ ( Gram Panchayat ) ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಳ ಮಾಡಿ, ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರುಗೆ ರೂ.3,000, ಉಪಾಧ್ಯಕ್ಷರಿಗೆ ರೂ.2,000 ಹಾಗೂ ಸದಸ್ಯರಿಗೆ ರೂ.1000 ಮಾಸಿಕ ಗೌರವಧನವನ್ನು ನಿಗಧಿಪಡಿಸಲಾಗಿತ್ತು ಎಂದಿದ್ದಾರೆ.ಪ್ರಸ್ತುತ ಗೌರವಧನವನ್ನು ( honorarium ) ಪರಿಷ್ಕರಿಸಿ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳಿಗೆ ರೂ.6,000, ಉಪಾಧ್ಯಕ್ಷರುಗಳಿಗೆ ರೂ.4,000 ಹಾಗೂ ಸದಸ್ಯರುಗಳಿಗೆ ರೂ.2,000 ಮಾಸಿಕ ಗೌರವಧವನ್ನು ಪರಿಷ್ಕರಿಸಿ ನಿಗದಿಗೊಳಿಸಿ ಆದೇಶಿಸಿದ್ದಾರೆ.
BREAKING NEWS : ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಯಕ್ಷಗಾನ ಕಲಾವಿದ ‘ಗುರುವಪ್ಪ ಬಾಯಾರು’ ನಿಧನ