ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಆರೋಪಿ ನವೀನ್ ಗೌಡ ವಿರುದ್ಧ ಶಾಸಕ ಎ. ಮಂಜು ಎಸ್ ಐಟಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಎಸ್ ಐಟಿ ಕಚೇರಿಗೆ ಶಾಸಕ ಎ.ಮಂಜು ದೂರು ನೀಡಿದ್ದಾರೆ. ಶಾಸಕ ಎ. ಮಂಜುಗೆ ಪೆನ್ ಡ್ರೈವ್ ನೀಡಿದ್ದಾಗಿ ಹೇಳಿದ್ದ ನವೀನ್ ಗೌಡ ವಿರುದ್ಧ ಶಾಸಕ ಎ.ಮಂಜು ದೂರು ನೀಡಿದ್ದಾರೆ. ಅರಕಲಗೂಡ ಜೆಡಿಎಸ್ ಶಾಸಕ ಎ. ಮಂಜುಗೆ ನಾನು ಪೆನ್ ಡ್ರೈವ್ ವನ್ನು ಏಪ್ರಿಲ್ 21 ರಂದು ಮಾರುತಿ ಕಲ್ಯಾಣ ಮಂದಿರದ ಬಳಿ ನೀಡಿದ್ದೇನೆ ಎಂದು ನವೀನ್ ಗೌಡ ಫೇಸ್ ಬುಕ್ ಪೋಸ್ಟ್ ಮಾಡಿದ್ದ. ಈ ಅರೋಪಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಗೆ ಎ. ಮಂಜು ದೂರು ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ನವೀನ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದು, ಎ. ಮಂಜುಗೆ ಪೆನ್ ಡ್ರೈವ್ ಕೊಟ್ಟ ನಂತರವೇ ಪೆನ್ ಡ್ರೈವ್ ಸೋರಿಕೆ ಆಗಿದೆ ಎಂದು ಹೇಳಿಕೆ ನೀಡಿದ್ದರು.