ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಶ್ರೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ತಿರುವು ಸಿಕ್ಕಿದ್ದು, ಪ್ರಕರಣದ 8ನೇ ಆರೋಪಿಯಾಗಿರುವ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಮೋದಿ ಬಿಜೆಪಿ ಹಾಗೂ ಹೆಚ್‍ಡಿ ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಡಿಕೆ ಶಿವಕುಮಾರ್ ನನಗೆ 100 ಕೋಟಿ ಅವರ ನೀಡಿದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ನಾಳೆ ಸಂಜೆ ಅವರಿಗೆ ಎಸ್ ಐ ಟಿ ಕಸ್ಟರ್ಡಿಯಲ್ಲಿರುವ ದೇವರಾಜ ಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಇದೆ. ಹಾಸನದಲ್ಲಿ ಎಸ್ಐಟಿ ವಶದಲ್ಲಿರುವ ದೇವರಾಜೇಗೌಡ ಸ್ಪೋಟಕ ಹೇಳಿಕೆ ನೀಡಿದ್ದು, ನನ್ನ ವಿರುದ್ಧ ಲೈಂಗಿಕ ಕಿರುಕುಳ ಕೆಸ್ ಹಾಕಿಸಿದ್ರು ಸಾಕ್ಷಿ ಸಿಗಲಿಲ್ಲ.ನಂತರ ಅತ್ಯಾಚಾರಕ್ಕೆ ಸಾಕಿದರು ಅದರಲ್ಲೂ ಸಾಕ್ಷಿ ಸಿಗಲಿಲ್ಲ ಎಂದು ಹಾಸನದಲ್ಲಿ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಹೇಳಿಕೆ ನೀಡಿದರು.
ನನ್ನ ಮಟ್ಟ ಹಾಕಲು ಪೆನ್ಡ್ರಾವ್ ಕೆಸ್ ನಲ್ಲಿ ಲಾಕ್ ಮಾಡಿಸಿದ್ದಾರೆ. ಇವರೆಲ್ಲರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಇದೆ ನಾನು ಕೂಡ ಕಾನೂನು ಹೋರಾಟ ಮಾಡುತ್ತೇನೆ ಡಿಕೆ ಶಿವಕುಮಾರ್ ರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದರು.
ಮೋದಿ, ಬಿಜೆಪಿ, ಎಚ್ ಡಿ ಕುಮಾರಸ್ವಾಮಿ ಕೆಟ್ಟ ಹೆಸರು ತರಲು ನೂರು ಕೋಟಿ ರೂಪಾಯಿ ಆಫರ್ ನೀಡಿದರು.ಡಿಸಿಎಂ ಡಿಕೆ ಶಿವಕುಮಾರ್ ನನ್ನನ್ನು ಕರೆಸಿ ದೊಡ್ಡ ಮಟ್ಟದ ಆಫರ್ ನೀಡಿದರು. ನನಗೆ ಸುಮಾರು 100 ಕೋಟಿ ರೂಪಾಯಿ ಆಫರ್ ಕೊಟ್ಟರು. 5 ಕೋಟಿ ಅಡ್ವಾನ್ಸ್ ದುಡ್ಡನ್ನ ಬೌರಿಂಗ್ ಕ್ಲಬ್ ಗೆ ರೂಮ್ ನಂಬರ್ 110ಕ್ಕೆ ನನ್ನ ರೂಮಿಗೆ ಕಳುಹಿಸಿದರು. ಕಾರ್ತಿಕ ಕರೆಸಿಕೊಂಡು ಪೆನ್ ಡ್ರೈವ್ ರೆಡಿ ಮಾಡಿದ್ದಾರೆ.
ನಾಲ್ವರು ಸಚಿವರ ಕಮಿಟಿಯನ್ನು ಡಿಕೆ ಶಿವಕುಮಾರ್ ನೇಮಕ ಮಾಡಿದರು. ಚೆಲುವರಾಯಸ್ವಾಮಿ ಕೃಷ್ಣಭೈರೇಗೌಡ ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತೊಬ್ಬ ಇನ್ನೊಬ್ಬರು ಸಚಿವರನ್ನು ಡಿ ಕೆ ಶಿವಕುಮಾರ್ ನೇಮಿಸಿದ್ದರು. ಎಂದು ವಕೀಲ ದೇವರಾಜೇಗೌಡ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸ್ಪೋಟಕ ವಾದಂತಹ ಆರೋಪ ಮಾಡಿದ್ದಾರೆ.