ದಾವಣಗೆರೆ: ಜಿಲ್ಲೆಯಲ್ಲಿ ಕೆಳವರ್ಗದವರು ಮನೆಗಳಲ್ಲಿ ಪಾದಪೂಜೆ ಸ್ವೀಕರಿಸುವ ಆಚರಣೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂದುವರೆಸಿದ್ದಾರೆ.
BIGG NEWS: ಭಾರತ- ಚೀನಾ ಸಂಘರ್ಷಕ್ಕೆ ನೆಹರೂ ಅವರೇ ಕಾರಣ;ಸಿ.ಟಿ ರವಿ ಆರೋಪ
ಇಲ್ಲಿನ ಜಯನಗರದ ನಿವಾಸಿ ಹಾಗು ದಲಿತ ಸಮುದಾಯದ ಮುಖಂಡ ಆಲೂರು ನಿಂಗರಾಜ್ ನಿವಾಸದಲ್ಲಿ ಶ್ರೀಗಳು ಪಾದಪೂಜೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ರಾಮರಾಜ್ಯ ಆಗಬೇಕಾಗಿರುವುದು ಒಂದು ಬಾಕಿ ಇದೆ ಎಂದರು. ಮಂದಿರ ನಿರ್ಮಾಣಕ್ಕಾಗಿ ನಾವು ತಲೆತಲಾಂತರಗಳಿಂದ ಶ್ರಮಿಸಿದ್ದೇವೆ. ಇದೀಗ ಕನಸು ನನಸಾಗುವ ಸಂದರ್ಭ ಬಂದಿದೆ.
BIGG NEWS: ಭಾರತ- ಚೀನಾ ಸಂಘರ್ಷಕ್ಕೆ ನೆಹರೂ ಅವರೇ ಕಾರಣ;ಸಿ.ಟಿ ರವಿ ಆರೋಪ
ಇನ್ನೊಂದು ವರ್ಷ ಅಂದರೆ, 2024ರ ಜನವರಿ ವೇಳೆಗೆ ಶ್ರೀರಾಮನ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಆಗಲಿದೆ ಎಂದರು.ದಲಿತ ಮುಖಂಡ ಆಲೂರು ನಿಂಗರಾಜ್ ಮಾತನಾಡಿ, ಪೇಜಾವರ ಶ್ರೀಗಳು ನಮ್ಮ ನಿವಾಸಕ್ಕೆ ಆಗಮಿಸಿ ಪಾದಪೂಜೆ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ ಎಂದರು.