ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank-PPBL) ಫೆಬ್ರವರಿ 26 ರಂದು ತನ್ನ ಮಂಡಳಿಯನ್ನು ಪುನರ್ ರಚಿಸಿದೆ ಎಂದು ಘೋಷಿಸಿತು. ಸೋಮವಾರ ವಿಜಯ್ ಶೇಖರ್ ಶರ್ಮಾ ( Vijay Shekhar Sharma resigned ) ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಅರೆಕಾಲಿಕ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಮಂಡಳಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊಸ ನಾಯಕತ್ವದಲ್ಲಿ ಶ್ರೀ ಶ್ರೀನಿವಾಸನ್ ಶ್ರೀಧರ್, ಶ್ರೀ ದೇಬೇಂದ್ರನಾಥ್ ಸಾರಂಗಿ, ಶ್ರೀ ಅಶೋಕ್ ಕುಮಾರ್ ಗರ್ಗ್ ಮತ್ತು ಶ್ರೀಮತಿ ರಜನಿ ಸೆಖ್ರಿ ಸಿಬಲ್ ಸ್ವತಂತ್ರ ನಿರ್ದೇಶಕರಾಗಿ ಸೇರಿದ್ದಾರೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ದೇವೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗರ್ಗ್ ಮತ್ತು ನಿವೃತ್ತ ಐಎಎಸ್ ರಜನಿ ಸೆಖ್ರಿ ಸಿಬಲ್ ಪಿಪಿಬಿಎಲ್ ಮಂಡಳಿಗೆ ಸೇರಿದ್ದಾರೆ.
ಈ ಹಿಂದೆ ಪೇಟಿಎಂ ಪೇಮೆಂಟ್ ಬ್ಯಾಂಕ್ ವಹಿವಾಟಿನ ಮೇಲೆ ಆರ್ ಬಿಐ ನಿರ್ಬಂಧ ಹೇರಿತ್ತು. ನಿರ್ಬಂಧ ತೆರವಿಗೆ ಪೇಟಿಯಂ ಆರ್ ಬಿಐ ಸಂಪರ್ಕಿಸಿದ್ದರೂ, ಅದಕ್ಕೆ ಒಪ್ಪಿರಲಿಲ್ಲ. ಈ ಬೆನ್ನಲ್ಲೇ ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಮಂಡಳಿಯನ್ನು ಪುನರ್ ರಚಿಸಲಾಗಿದೆ.
BREAKING: ನಾಳೆ ‘ರಾಜ್ಯಸಭಾ ಚುನಾವಣೆ’ ಹಿನ್ನಲೆ: ಇಂದಿನಿಂದ ಫೆ.28ರವರೆಗೆ ‘ವಿಧಾನಸೌಧ’ದ ಸುತ್ತ ‘ನಿಷೇಧಾಜ್ಞೆ’ ಜಾರಿ
BREAKING: ‘ಪಂಚಭೂತ’ಗಳಲ್ಲಿ ಸುರಪುರ ಕಾಂಗ್ರೆಸ್ ‘ಶಾಸಕ ರಾಜಾ ವೆಂಕಟಪ್ಪ ನಾಯಕ’ ಲೀನ