ಇಂದು ‘ರಾಜ್ಯಸಭಾ ಚುನಾವಣೆ’ ಹಿನ್ನಲೆ: ಫೆ.28ರವರೆಗೆ ‘ವಿಧಾನಸೌಧ’ದ ಸುತ್ತ ‘ನಿಷೇಧಾಜ್ಞೆ’ ಜಾರಿ

ಬೆಂಗಳೂರು: ಇಂದು ಕರ್ನಾಟಕ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸೌಧದಲ್ಲಿ ಮತಚಲಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಫೆಬ್ರವರಿ.26ರಿಂದ ಫೆಬ್ರವರಿ.28ರವರೆಗೆ ವಿಧಾನಸೌಧದ ಸುತ್ತಮುತ್ತಲೂ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದು, ದಿನಾಂಕ 12-02-2024ರಿಂದ ವಿಧಾನಸೌಧದಲ್ಲಿ ಅಧಿವೇಶನ ಪ್ರಾರಂಭವಾಗಿದ್ದು, ದಿನಾಂಕ 26-02-2024 ಮತ್ತು 28-02-2024 ರಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನವು ನಡೆಯಲಿರುವುದರಿಂದ ಮತ್ತು ದಿನಾಂಕ 27-02-2024 ರಂದು ವಿಧಾನಸೌಧದಲ್ಲಿ ರಾಜ್ಯಸಭೆಯ ದೈವಾರ್ಷಿಕ ಚುನಾವಣೆಯ … Continue reading ಇಂದು ‘ರಾಜ್ಯಸಭಾ ಚುನಾವಣೆ’ ಹಿನ್ನಲೆ: ಫೆ.28ರವರೆಗೆ ‘ವಿಧಾನಸೌಧ’ದ ಸುತ್ತ ‘ನಿಷೇಧಾಜ್ಞೆ’ ಜಾರಿ