ಬೆಂಗಳೂರು: ಪೇ-ಸಿಎಂ ಪೋಸ್ಟರ್ ( Pay CM Poster ) ವೈರಲ್ ಪ್ರಕರಣ ಸಂಬಂಧ ಇಂದು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪೋಸ್ಟರ್ ವೈರಲ್ ಮಾಡಿದವರಿಗೆ ಬಿಗ್ ಶಾಕ್ ನೀಡಿದ್ದಾರೆ.
ಈ ಕುರಿತಂತೆ ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದು, ಪೇ-ಸಿಎಂ ಪೋಸ್ಟರ್ ವೈರಲ್ ಸಂಬಂಧ ನಗರದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಪಿಎಫ್ಐ’ ಮುಖಂಡ ಶಾಹಿದ್ ಬಿಡುಗಡೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
ಅಂದಹಾಗೇ ಬಂಧಿತ ಆರೋಪಿಗಳನ್ನು ಸಂಜಯ್, ಸಿದ್ಧಯ್ಯ, ವಿನೋದ್, ಮದನ್ ಹಾಗೂ ವಿಶ್ವಮೂರ್ತಿ ಎಂದು ಗುರುತಿಸಲಾಗಿದೆ. ಇವರಲ್ಲಿ ಬಂಧಿತ ಆರೋಪಿ ಸಂಜಯ್ ಕೆಪಿಸಿಸಿಯ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.
ಇದೀಗ ಬಂಧನದ ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಪೇ-ಸಿಎಂ ಪೋಸ್ಟರ್ ವೈರಲ್ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.