ಬೆಂಗಳೂರು: ನಗರದ ಹಲವೆಡೆ ದಾಖಲಾಗಿರುವ ‘PAY CM’ ಪೋಸ್ಟರ್ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡುವ ಸಾಧ್ದತೆಯಿದೆ.
ಹೌದು, ಸದ್ಯ ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಆದ್ದರಿಂದ ಸದ್ಯ ‘PAY CM’ ಪೋಸ್ಟರ್ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡುವ ಎಲ್ಲಾ ಸಾಧ್ದತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನೂ, ರಾಜ್ಯ ಬಿಜೆಪಿ ಸರ್ಕಾರದ ( BJP Government ) ವಿರುದ್ಧ ಕಾಂಗ್ರೆಸ್ ( Congress ) ವಿನೂತನ ಅಭಿಯಾನ ಆರಂಭಿಸಿದೆ ಈ ಬೆನ್ನಲ್ಲೇ ರಾಜ್ಯ ನನ್ನ ಹೆಸರು ಕೆಡಿಸಲು ಮಾಡಿಸಿದ ಷಡ್ಯಂತ್ರ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಕೇಸ್ ಪೈಲ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಇದೆಲ್ಲಾ ಸ್ಯಾಡೋ ಕ್ಯಾಪೇನ್ ಗಳು ಜನರಿಗೆ ಗೊತ್ತಾಗಲ್ಲ. ಕಡಿವಾಣ ಹಾಕಬೇಕು ಅಂತ ತೀರ್ಮಾಣ ಮಾಡಿದ್ದೀನಿ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ QR ಕೋಡ್ ಜಟಾಪಟಿ ಶುರುವಾಗಿದೆ. 40% ಕಮಿಷನ್ ಆರೋಪ ಮುಂದಿಟ್ಟುಕೊಂಡು ಪೇ ಸಿಎಂ (Pay Cm Posters) ಎಂದು ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ಪೋಸ್ಟರ್ ನಗರದ ಹಲವು ಕಡೆಗಳಲ್ಲಿ ಹಾಕಲಾಗಿತ್ತು.
ಬೆಂಗಳೂರಿಗರೇ ಗಮನಿಸಿ : ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ |Power Cut
ICC T20 Rankings: : T20 Rankingನಲ್ಲಿ ಮಿಂಚಿದ ಸೂರ್ಯ, ಭುವಿಗೆ ಭಾರೀ ಮುಖಭಂಗ