ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಈಗ ಮಳೆಗಾಲ ಶುರುವಾಗಿದೆ. ಇದರಿಂದ ಜನರು ರೋಸಿ ಹೋಗಿದ್ದಾರೆ. ಹೀಗಿರುವಾಗ ಮುಖದ ಬಗ್ಗೆ ಕಾಳಜಿ ವಹಿಸಬೇಕು.

ಮಳೆಗಾಲ ತಂಪು ವಾತಾವರಣದಿಂದ ಇರುತ್ತದೆ. ಹೀಗಾಗಿ ತ್ವಚೆ ಒಣಗುವುದಿಲ್ಲ. ಹೀಗಾಗಿ ಮುಖಕ್ಕೆ ಯಾವುದೇ ಸಮಸ್ಯೆ ಇಲ್ಲ . ಆದರೆ ನಿಮ್ಮ ಈ ಅಭಿಪ್ರಾಯ ತಪ್ಪು. ಮಳೆಗಾಲದಲ್ಲಿಯೂ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅದಕ್ಕೆ ಏನು ಮಾಡಬೇಕು ಎಂಬುದು ತಿಳಿದುಕೊಳ್ಳೊಣ

BIGG NEWS: ನಿರಂತರ 40 ಗಂಟೆ ಕಾರ್ಯಾಚರಣೆ ನಡೆಸಿದ್ರೂ ಬಾಲಕಿ ಪತ್ತೆಯಾಗಿಲ್ಲ; SDRF ತಂಡ ಆಗಮನ

 

ಸೌಂದರ್ಯ ವರ್ಧಕಗಳಿಂದ ದೂರವಿರಿ

ಕೆಲವು ಮೇಕಪ್‌ ಪ್ರಿಯರಿಗೆ ಮುಖದ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಇರುತ್ತದೆ. ಹೀಗಾಗಿ ಅವರು ಎಲ್ಲಾ ದಿನಗಳಲ್ಲೂ ತಪ್ಪದೆ ಮುಖಕ್ಕೆ ಮೇಕಪ್‌ ಮಾಡಿಕೊಳ್ಳುತ್ತಾರೆ. ಆದರೆ ಮಳೆಗಾಲದಲ್ಲಿ ನೀವು ಭಾರಿ ಮೇಕಪ್ ಮತ್ತು ಲೋಷನ್‌ ಹಚ್ಚಿಕೊಳ್ಳುವುದರಿಂದ ಆದಷ್ಟು ದೂರವಿರಬೇಕು. ಏಕೆಂದರೆ ಮಳೆಗಾಲದಲ್ಲಿ ನಿಮ್ಮ ಚರ್ಮವು ಮೊಡವೆ ಮತ್ತು ಅಲರ್ಜಿಗಳಿಗೆ ಒಳಗಾಗಬಹುದು.

ಶಿಲೀಂದ್ರಗಳ ಸೋಂಕಿನ ಅಪಾಯ

ಮಳೆಗಾಲದಲ್ಲಿ ಫಂಗಲ್ ಸೋಂಕುಗಳು ತೀರಾ ಸಾಮಾನ್ಯ. ಹೀಗಾಗಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು. ಮಳೆಗಾಲದಲ್ಲಿ ಜಾಸ್ತಿ ಬೆವರುವುದಿಲ್ಲ. ಹೀಗಾಗಿ ಹೆಚ್ಚು ಸ್ನಾನದ ಅಗತ್ಯವಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಶಿಲೀಂದ್ರಗಳ ಅಪಾಯ ಜಾಸ್ತಿ ಇರುವುದರಿಂದ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅನಿವಾರ್ಯ.

ಸನ್‌ಸ್ಕ್ರೀನ್‌ ಬಳಸಿ

ಸನ್‌ಸ್ಕ್ರೀನ್ ಅನ್ನು ವರ್ಷಪೂರ್ತಿ ಬಳಸಬಹುದು. ಎಲ್ಲಾ ಕಾಲದಲ್ಲೂ ಯುವಿ ಕಿರಣಗಳು ನಿಮ್ಮ ತ್ವಚೆಗೆ ಹಾನಿ ಉಂಟುಮಾಡುತ್ತವೆ. ಆದ್ದರಿಂದ ಮನೆಯ ಒಳಗೆ ಮತ್ತು ಹೊರಗೆ, ಎರಡೂ ಕಡೆಗಳಲ್ಲಿ ಸನ್‌ಸ್ಕ್ರೀನ್ ಬಳಸುವುದರಿಂದ ನಿಮ್ಮ ಚರ್ಮವು ಹಾನಿಗೊಳಗಾಗುವುದನ್ನು ತಡೆಯಬಹುದು.

ಮಾಯಿಶ್ಚರೈಸರ್

ಮಳೆಗಾಲದಲ್ಲಿ ಮಾಯಿಶ್ಚರೈಸರ್ ಬಳಸುವುದು ಸನ್‌ಸ್ಕ್ರೀನ್‌ನಷ್ಟೇ ಅವಶ್ಯಕ. ಇದು ನಿಮ್ಮ ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ. ಒಣಚರ್ಮದಿಂದ ಚರ್ಮವನ್ನು ಆರೋಗ್ಯಕರವಾಗಿರಲು ಮಾಯಿಶ್ಚರೈಸರ್ ಸಹಾಯ ಮಾಡುತ್ತದೆ. ಚಳಿಗಾಲದಂತೆ ಮಳೆಗಾಲದ ವಾತಾವರಣ ಕೂಡಾ ಇರುವುದರಿಂದ ಇದನ್ನು ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಎಣ್ಣೆ ರಹಿತ ಅಥವಾ ಜೆಲ್ ಆಧಾರಿತ ಮಾಯಿಶ್ಚರೈಸರ್ ಬಳಸಿ.

ಹೆಚ್ಚು ನೀರು ಕುಡಿಯಿರಿ

ಮಳೆಗಾಲ ಹೆಚ್ಚು ತೇವಾಂಶದಿಂದ ತುಂಬಿರುತ್ತದೆ. ಇದು ದೇಹದಲ್ಲಿ ಬಹಳಷ್ಟು ನೀರಿನ ನಷ್ಟಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆವರುವಿಕೆ ಕಡಿಮೆ. ಹೀಗಾಗಿ ಬಾಯಾರಿಕೆ ಆಗುವುದಿಲ್ಲ. ದೇಹದಲ್ಲಿ ಬೇಕಾದಷ್ಟು ನೀರು ಇದೆ ಎಂದು ಭಾಸವಾಗುತ್ತದೆ.

Share.
Exit mobile version