ಬೆಂಗಳೂರು : ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಮನೆ ಮುಂದೆ ವಾಹನ ಪಾರ್ಕಿಂಗ್ ಮಾಡಬೇಕಾದರೆ ಹಣ ಕಟ್ಟಬೇಕು ಎಂಬ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ಧಿಡೀರ್ ಅಂತ ಬಿಬಿಎಂಪಿ ಹೊಸ ಪಾರ್ಕಿಂಗ್ ಟೆಂಡರ್ ಕಾಯಿದೆ ಜಾರಿಗೆ ತರಲು ಮುಂದಾಗಿದ್ದು, ನಗರದ ಎಂಟು ವಲಯಗಳಿಗೆ ಟೆಂಡರ್ ಕರೆದಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಕ್ಯ ಆಯುಕ್ತ ತುಷಾರ್ ಗಿರಿನಾಥ್ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ ಮಾಡುವ ಬಗ್ಗೆ ಹಲವು ಭಾರಿ ಚರ್ಚಿಸಲಾಗಿದೆ. ಈ ಎಲ್ಲಾ ವ್ಯವಸ್ಥಿತವಾಗಿ ಜಾರಿಯಾಗುತ್ತಿದೆ ಎಂದರು. ಈ ಹಿಂದೆ ಜನರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ರಸ್ತೆ ಬದಿ ವಾಹನ ನಿಲ್ಲಿಸುವ ಪೇ & ಪಾರ್ಕಿಂಗ್ ಪಾಲಿಸಿ ಶೀಘ್ರವೇ ಬೆಂಗಳೂರಿನಲ್ಲಿ ಮತ್ತೆ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಘೋಷಿಸಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯ ಎಂಟು ವಲಯಗಳಿಗೆ ಅನ್ವಯವಾಗುವಂತೆ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಹೊಸ ಪಾರ್ಕಿಂಗ್ ಕಾಯಿದೆ ಜಾರಿಗೆ ತರಲು ಸರ್ಕಾರ ಸಿದ್ದತೆ ನಡೆಸಿದೆ ಎಂದು ತಿಳಿದು ಬಂದಿದೆ.
ಈ ಕಾಯಿದೆ ಪ್ರಕಾರ ಮನೆ ಮಾಲೀಕರು ತಮ್ಮ ಎದುರಿನ ರಸ್ತೆ ಪಕ್ಕ ಪಾರ್ಕಿಂಗ್ ಮಾಡಲು ಹಣ ಪಾವತಿ ಮಾಡಬೇಕು. ವಾರ್ಷಿಕವಾಗಿ 3 ಸಾವಿರದಿಂದ 5 ಸಾವಿರ ರೂ ಹಣ ನೀಡಿ ಪರವಾನಗಿ ಪಡೆಯಬೇಕು ಎಂಬ ನಿಯಮವನ್ನು ಸದ್ಯದಲ್ಲೇ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಹೌದು, ಧಿಡೀರ್ ಅಂತ ಬಿಬಿಎಂಪಿ ಹೊಸ ಪಾರ್ಕಿಂಗ್ ಟೆಂಡರ್ ಕಾಯಿದೆ ಜಾರಿಗೆ ತರಲು ಮುಂದಾಗಿದ್ದು, ನಗರದ ಎಂಟು ವಲಯಗಳಿಗೆ ಟೆಂಡರ್ ಕರೆದಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಕ್ಯ ಆಯುಕ್ತ ತುಷಾರ್ ಗಿರಿನಾಥ್ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ ಮಾಡುವ ಬಗ್ಗೆ ಹಲವು ಭಾರಿ ಚರ್ಚಿಸಲಾಗಿದೆ. ಈ ಎಲ್ಲಾ ವ್ಯವಸ್ಥಿತವಾಗಿ ಜಾರಿಯಾಗುತ್ತಿದೆ ಎಂದರು. ಒಟ್ಟಿನಲ್ಲಿ ಅದೇನೆ ಇರಲಿ ಮನೆ ಮುಂದೆ ವಾಹನ ಪಾರ್ಕಿಂಗ್ ಮಾಡಬೇಕಾದರೆ ಹಣ ಕಟ್ಟಬೇಕು ಎಂಬ ಹೊಸ ನಿಯಮ ಮನೆ ಮಾಲೀಕರಿಗೆ ಬಿಗ್ ಶಾಕ್ ನೀಡಿದೆ.
‘ಪೇ-ಸಿಎಂ’ ಪೋಸ್ಟರ್ ವೈರಲ್: ಹಲವು ‘ಪೊಲೀಸ್ ಠಾಣೆ’ಗಳಲ್ಲಿ ದೂರು ದಾಖಲು | Pay CM Poster