ಮಂಡ್ಯ: ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳೆರಡು ಸೇರಿ ಪ್ರತಿ ಟನ್ ಕಬ್ಬಿಗೆ ಬಾಕಿ ನೀಡಬೇಕಾಗಿರುವ ರೂ 100 ಹೆಚ್ಚುವರಿ ಹಣವನ್ನು ರೈತರ ಖಾತೆಗೆ ಹಣ ಸಂದಾಯ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಬ್ಬು ಸರಬರಾಜು ಹೆಚ್ಚುವರಿ ಕಬ್ಬಿನ ಬೆಲೆ ಕುರಿತು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿದರು.
2025-26ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಎಫ್‌ಆರ್‌ಪಿ (FRP) ಮೇಲೆ ಪ್ರತಿ ಟನ್‌ಗೆ ₹100 ಹೆಚ್ಚುವರಿ ಹಣವನ್ನು ಜಮಾ ಮಾಡಲು ತೀರ್ಮಾನಿಸಲಾಗಿದೆ.
ಇದರಲ್ಲಿ ರಾಜ್ಯ ಸರ್ಕಾರವು ₹50 ಆರ್ಥಿಕ ನೆರವು ಮತ್ತು ಕಾರ್ಖಾನೆಗಳು ಹೆಚ್ಚುವರಿ ₹50 ಸೇರಿಸಿ, ಒಟ್ಟು ₹100 ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಈಗಾಗಲೇ ಸರ್ಕಾರದ ಹಂತದಲ್ಲಿ ಈಗಾಗಲೇ ಹಣವನ್ನು ಬಿಡುಗಡೆಯಾಗಿದ್ದು ಕಾರ್ಖಾನೆಯವರು ಯಾವುದೇ ಸಬೂಬು ಹೇಳದೇ ರೈತರ ಹಣ ಸಂದಾಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸರ್ಕಾರದ ಆದೇಶವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಪಾಲಿಸಬೇಕು. ಮಂಡ್ಯ ಸಕ್ಕರೆ ಕಾರ್ಖಾನೆಯ ಮಾಲೀಕರು ಸರ್ಕಾರ ನೀಡಿರುವ ರೂ 50ಗಳನ್ನು ಸಹಾಯ ಧನವನ್ನು ಪಡೆದು ಕಾರ್ಖಾನೆಯ ಹೆಚ್ಚುವರಿ ಹಣ 50 ಸೇರಿಸಿ ಒಟ್ಟು ರೂ 100 ರೈತರ ಖಾತೆಗೆ ಸಂದಾಯ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರತೀಕ್ ಹೆಗ್ಡೆ ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರು ಉಪಸ್ಥಿತರಿದ್ದರು.
ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್ ಮಾರ್ಗಸೂಚಿ ಅಳವಡಿಸಲು ಚಿಂತನೆ: ಕಾರ್ಯದರ್ಶಿ ರೋಹಿಣಿ ಸಿಂಧೂರಿ
ಯಾವುದೇ ಹೂಡಿಕೆ ಮಾಡುವ ಅಗತ್ಯವಿಲ್ಲ ; ದಿನಕ್ಕೆ 2 ಗಂಟೆ ಹೀಗೆ ಮಾಡಿ, ತಿಂಗಳಿಗೆ 1 ಲಕ್ಷ ರೂ. ಖಚಿತ.!








