ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಾದ-ಪ್ರತಿ ವಾದವನ್ನು ಆಲಿಸಿದಂತ ನ್ಯಾಯಾಲಯವು, ಅರ್ಜಿಯ ವಿಚಾರಣೆಯ ಬಳಿಕ ಆದೇಶವನ್ನು ಆಗಸ್ಟ್.31ಕ್ಕೆ ಕಾಯ್ದಿರಿಸಿದೆ.
ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲುಪಾಲಾಗಿರುವಂತ ಆರೋಪಿ ಪವಿತ್ರಾ ಗೌಡ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ಆರೋಪಿ ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೆಬಾಸ್ಟಿನ್ ವಾದಿಸಿದರು. ಮೊದಲಿಗೆ ಅಪರಿಚಿತ ಆರೋಪಿಗಳೆಂದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ರೇಣುಕಾಸ್ವಾಮಿ ಇನ್ ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದರು. ಎ3 ಆರೋಪಿ ಪವನ್ ಬಳಿಯಲ್ಲಿ ಇರುವಂತ ಪೋನ್ ನಂಬರ್ ತನ್ನದೆಂದು ಸಂದೇಶ ಕಳುಹಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದಂತ ಪವಿತ್ರಾ ಗೌಡ, ವಾಟ್ಸ್ ಆಪ್ ಮಾಡುವಂತೆ ಸೂಚಿಸಿದ್ದರು. ಕರೆ ಮಾಡಿದಾಗ ಪವಿತ್ರಾ ಗೌಡ ಪವನ್ ಮೊಬೈಲ್ ಸಂಖ್ಯೆಯಿಂದಲೇ ಮಾತನಾಡಿದ್ದರು ಎಂಬುದಾಗಿ ತಿಳಿಸಿದರು.
ಪವಿತ್ರಾ ಗೌಡ ಬಳಿಕ, ಎ3 ಆರೋಪಿ ಪವನ್ ಅವರು ರೇಣುಕಾಸ್ವಾಮಿ ಜೊತೆಗೆ ಪವಿತ್ರಾ ಗೌಡರಂತೆ ಚಾಟ್ ಮಾಡಿದ್ದಾರೆ. ಪವಿತ್ರಾ ಗೌಡ ಸೇರಿದಂತೆ ಮತ್ತಿತರೆ ಆರೋಪಿಗಳು ಸೇರಿ ಕೊಲೆ ಸಂಚು ರೂಪಿಸಿದ್ದಾರೆ. ಚಿತ್ರದುರ್ಗದ ಬಾಲಾಜಿ ಬಾರ್ ಬಳಿಯಲ್ಲಿ ರೇಣುಕಾಸ್ವಾಮಿ ಕಿಡ್ನಾಪ್ ಮಾಡಲಾಗಿದೆ. ಎ.8 ಆರೋಪಿಯ ಟೊಯೋಟಾ ಇಟಿಎಸ್ ಕಾರಿನಲ್ಲಿ ಬೆಂಗಳೂರಿನ ಆರ್ ಆರ್ ನಗರದ ಶೆಡ್ ಗೆ ಕರೆತರಲಾಗಿದೆ ಎಂದು ವಿವರಿಸಿದರು.
ರೇಣುಕಾಸ್ವಾಮಿಯ ಕೈಗಡಿಯಾರವನ್ನು ಕಿತ್ತುಕೊಳ್ಳಲಾಗಿದೆ. ಈ ಎಲ್ಲವನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಚಪ್ಪಲಿ, ಬಟ್ಟೆಯಲ್ಲಿ ಮೃತರ ಡಿಎನ್ಎ ಪತ್ತೆಯಾಗಿದೆ. ಪವಿತ್ರಾ ಗೌಡ ವಿರುದ್ಧದ ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಹೀಗಾಗಿ ಜಾಮೀನು ನೀಡುವಂತೆ ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿನ್ ಮನವಿ ಮಾಡಿದರು.
ಇನ್ನೂ ಮುಂದುವರೆದು, ಮಹಿಳೆಯರು, ವೃದ್ಧರರಿಗೆ ಸುಲಭವಾಗಿ ಜಾಮೀನು ನೀಡಲಾಗುತ್ತಿದೆ. ಪವಿತ್ರಾ ಗೌಡ ವಿರುದ್ಧ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿರುವುದನ್ನು ಪರಿಗಣಿಸಬೇಕು ಎಂದ ವಕೀಲರು, ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಾದಿಸಿದರು. ಈ ಮೂಲಕ ಸಿಟಿ ಸಿವಿಲ್ ಕೋರ್ಟ್ ನ್ಯಾಯಪೀಠಕ್ಕೆ ಪವಿತ್ರಾ ಗೌಡ ಅವರಿಗೆ ಜಾಮೀನು ನೀಡುವಂತೆ ಕೋರಿದರು.
ಈ ವಾದವನ್ನು ಆಲಿಸಿದಂತ ಬೆಂಗಳೂರಿನ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್, ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿತ್ತು. ಇಂದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಎಸ್ ಪಿಪಿ ಸಲ್ಲಿಸಿದ್ದರು. ಈ ಬಳಿಕ ಜಾಮೀನು ನೀಡದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಈ ಮನವಿಯ ಬಳಿಕ ವಾದ, ಪ್ರತಿ ವಾದವನ್ನು ಆಲಿಸಿದಂತ ನ್ಯಾಯಪೀಠವು, ಆರೋಪಿ ಪವಿತ್ರಾ ಗೌಡ ವಿರುದ್ಧದ ಜಾಮೀನು ಅರ್ಜಿಯ ವಿಚಾರಣೆಯ ಆದೇಶವನ್ನು ಆಗಸ್ಟ್.31ಕ್ಕೆ ಕಾಯ್ದಿರಿಸಿದೆ. ಈ ಮೂಲಕ ಇಂದು ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪವಿತ್ರಾ ಗೌಡಗೆ ರಿಲೀಫ್ ಸಿಗದಂತೆ ಆಗಿದೆ.
BREAKING: ಮಾಜಿ ಸಿಎಂ ಎಸ್.ಎಂ ಕೃಷ್ಣ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್ | Former CM SM Krishna
ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!