ಪಾಟ್ನಾ(ಬಿಹಾರ): ಪಾಟ್ನಾ ಎಸ್ಎಸ್ಪಿ ಮಾನವಜೀತ್ ಸಿಂಗ್ ಧಿಲ್ಲೋನ್ ಅವರು ಆರ್ಎಸ್ಎಸ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಹಾರ ಪೊಲೀಸರು ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲದೇ, 24 ಗಂಟೆಗಳ ಒಳಗೆ ಉತ್ತರಿಸುವಂತೆ ಅಧಿಕಾರಿಗೆ ಸೂಚಿಸಿದ್ದಾರೆ.
ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಜಿತೇಂದ್ರ ಸಿಂಗ್ ಗಂಗ್ವಾರ್ ಅವರು ನೀಡಿದ ಶೋಕಾಸ್ ನೋಟಿಸ್ನಲ್ಲಿ “ಎಸ್ಎಸ್ಪಿ ಅವರು ಸಾರ್ವಜನಿಕವಾಗಿ ಏಕೆ ಅಂತಹ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಹೇಳಿದ್ದಾರೆ.
ನಿಷೇಧಿತ ಸಂಘಟನೆಯಾದ ಪಿಎಫ್ಐಗೆ ಸಂಬಂಧ ಹೊಂದಿರುವ ಮೂವರನ್ನು ಪಾಟ್ನಾ ಪೊಲೀಸರು ಗುರುವಾರ ಬಂಧಿಸಿದ ನಂತರ, ಧಿಲ್ಲೋನ್ ತೀವ್ರಗಾಮಿ ಸಂಘಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನೊಂದಿಗೆ ಹೋಲಿಸಿದ್ದಾರೆ.
“ಆರ್ಎಸ್ಎಸ್ ತಮ್ಮ ಕಾರ್ಯಕರ್ತರನ್ನು ಸಂಘಟಿಸಿ ಹೇಗೆ ತರಬೇತಿ ನೀಡಲಾಗುತ್ತಿದೆಯೋ, ಇದೇ ಮಾದರಿಯನ್ನು ಪಿಎಫ್ಐ ಅನುಸರಿಸುತ್ತಿದೆ. ಮಾರ್ಷಲ್ ಆರ್ಟ್ಸ್ ವೇಷದಲ್ಲಿ ಅವರು ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆ” ಎಂದು ಧಿಲ್ಲೋನ್ ಹೇಳಿಕೆ ನೀಡಿದ್ದಾರೆ.
पटना के SSP ने पटना से पकड़े गए आतंकियों के ट्रेनिंग को RSS की ट्रेनिंग से जोड़ दिया. कहा कि जैसे आरएसएस की शाखा ऑर्गनाइज की जाती है, लाठी की ट्रेनिंग होती है वैसे ही ये फिजिकल ट्रेनिंग में ब्रेनवाश कर रहे थे. सुनिए पटना के एसएसपी मानवजीत सिंह ढिल्लो को pic.twitter.com/WkQ6lniTB9
— rajeshkumarojha (@rajeshrepoter) July 14, 2022
ಅವರ ಹೇಳಿಕೆಯ ನಂತರ, ಬಿಜೆಪಿ ನಾಯಕರಾದ ಹರಿ ಭೂಷಣ್ ಠಾಕೂರ್ ಮತ್ತು ನಿಖಿಲ್ ಆನಂದ್ ಅವರು ಆಘಾತಕಾರಿ ಹೇಳಿಕೆಗಾಗಿ ಧಿಲ್ಲೋನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
ಧಿಲ್ಲೋನ್ ಅವರ ವಿವಾದಾತ್ಮಕ ಹೇಳಿಕೆಗಾಗಿ ಬಿಜೆಪಿ ದಾಳಿ ನಡೆಸಿದರೆ, ಅದರ ಮೈತ್ರಿ ಪಾಲುದಾರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ) ಎಸ್ಎಸ್ಪಿಯನ್ನು ಸಮರ್ಥಿಸಿಕೊಂಡಿದೆ.
HAM ನ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ರಿಜ್ವಾನ್, “ಆರ್ಎಸ್ಎಸ್ ಹೇಗೆ ಶಾಖೆಗಳನ್ನು ಸಂಘಟಿಸುತ್ತದೆ. ಪಿಎಫ್ಐ ಅದೇ ರೀತಿಯಲ್ಲಿ ಯುವಕರಿಗೆ ತರಬೇತಿ ನೀಡುತ್ತಿದೆ ಎಂದು ಪಾಟ್ನಾ ಎಸ್ಎಸ್ಪಿ ಹೇಳಿದ್ದಾರೆ. ಅದರಲ್ಲಿ ತಪ್ಪೇನು? ಎಂದಿದ್ದಾರೆ.
Good News : ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಈ ವರ್ಷ 2 ಜೊತೆ ಸಮವಸ್ತ್ರ ವಿತರಣೆ!
Big news: ಸ್ವಂತ ಇಂಟರ್ನೆಟ್ ಸೇವೆ ಹೊಂದಿರುವ ದೇಶದ ಮೊದಲ & ಏಕೈಕ ರಾಜ್ಯ ʻಕೇರಳʼ: ಸಿಎಂ ಪಿಣರಾಯಿ ವಿಜಯನ್