ವಾಷಿಂಗ್ಟನ್ (ಯುಎಸ್): ಹೊಸ ಅಧ್ಯಯನವೊಂದು ಟೈಪ್ 2 ಡಯಾಬಿಟಿಸ್(type 2 diabetes)ಗೆ ಚಿಕಿತ್ಸೆ ನೀಡಲು ಹೊಸ ತಂತ್ರವನ್ನು ಪ್ರಸ್ತಾಪಿಸಿದೆ. ಇದು ವ್ಯಕ್ತಿಗಳನ್ನು ಅವರ ಸ್ವಂತ ಔಷಧದ ನಿಯಂತ್ರಣದಲ್ಲಿ ಇರಿಸುತ್ತದೆ.
ಟ್ರೈಮಾಸ್ಟರ್ ಅಧ್ಯಯನವು ಟೈಪ್ 2 ಡಯಾಬಿಟಿಸ್ ಹೊಂದಿರುವ ವ್ಯಕ್ತಿಗಳಿಗೆ ಮೂರು ವಿಭಿನ್ನ ಔಷಧಿಗಳ ಸರಣಿಯನ್ನು ಅನುಸರಿಸಿ ತಮ್ಮದೇ ಆದ ಔಷಧವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಈ ತಂತ್ರವು ಉತ್ತಮ ಚಿಕಿತ್ಸೆಯನ್ನು ಆಯ್ಕೆ ಮಾಡುವ ಹೊಸ ವಿಧಾನವಾಗಿದೆ ಎಂಬ ತೀರ್ಮಾನಕ್ಕೆ ಬಂದಿತು.
ಎಕ್ಸೆಟರ್ ವಿಶ್ವವಿದ್ಯಾನಿಲಯದ ಪ್ರಮುಖ ಲೇಖಕ ಡಾ ಬೆವರ್ಲಿ ಶೀಲ್ಡ್ಸ್ ಮಾತನಾಡಿ, “ಮಧುಮೇಹಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಉತ್ತಮ ಫಲಿತಾಂಶಗಳನ್ನು ಪಡೆಯಲು ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಕಾಪಾಡಿಕೊಳ್ಳಲು ಮೂಲಭೂತವಾಗಿದೆ. ನಮ್ಮ ಅಧ್ಯಯನವು ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರಿಗೆ ಮೊದಲನೆಯದಾಗಿ ಅನುಕ್ರಮವಾಗಿ ಸಾಮಾನ್ಯ ಔಷಧಿಗಳನ್ನು ತೆಗೆದುಕೊಳ್ಳಲು ಆದ್ಯತೆ ನೀಡುತ್ತದೆ. ಅವರಿಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಬಹುದು. ಜನರು ಫಲಿತಾಂಶಗಳನ್ನು ತಿಳಿದುಕೊಳ್ಳುವ ಮೊದಲೇ ಕುತೂಹಲಕಾರಿಯಾಗಿ ಜನರು ಆಯ್ಕೆಮಾಡಿದ ಚಿಕಿತ್ಸೆಯು ಸಾಮಾನ್ಯವಾಗಿ ಅವರಿಗೆ ಉತ್ತಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ನೀಡುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದರು.
“ನನಗೆ ಮೂರು ಔಷಧಗಳನ್ನು ನೀಡಲಾಯಿತು. ಮೊದಲೆರಡು ನನಗೆ ಕೆಲಸ ಮಾಡಲಿಲ್ಲ. ವಾಸ್ತವವಾಗಿ, ಅವುಗಳಲ್ಲಿ ಒಂದು ನನಗೆ ಇನ್ನಷ್ಟು ಕೆಟ್ಟದಾಗಿ ಪರಿಣಮಿಸಿತು. ನಂತ್ರ, ಮತ್ತೊಂದು ನನಗೆ ಸರಿಯಾದ ಔಷಧಿ ಎಂದು ನನಗೆ ತಿಳಿದಿತ್ತು. ನಾನು ಇಂದಿಗೂ ಅದರ ನಂಬಿಕೆ ಮೇಲೆ ಇದ್ದೇನೆ. ಈಗ ನಾನು ಇಷ್ಟಪಡುವ ಎಲ್ಲಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಸಾಧ್ಯವಾಗುತ್ತದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಸಂಶೋಧನೆಯ ಮೇಲ್ವಿಚಾರಣೆ ನಡೆಸಿದ ಎಕ್ಸೆಟರ್ ವಿಶ್ವವಿದ್ಯಾಲಯದ ಮಧುಮೇಹ ಸಲಹೆಗಾರ ಪ್ರೊಫೆಸರ್ ಆಂಡ್ರ್ಯೂ ಹ್ಯಾಟರ್ಸ್ಲೆ CBE ಮಾತನಾಡಿ, “ಒಂದೇ ರೋಗಿಯು ಮೂರು ವಿಭಿನ್ನ ರೀತಿಯ ಔಷಧವನ್ನು ಪ್ರಯತ್ನಿಸಿದ ಮೊದಲ ಅಧ್ಯಯನವಾಗಿದೆ ಎಂದಿದ್ದಾರೆ.
ದೆಹಲಿ: ಚರಂಡಿಯಲ್ಲಿ ಸಿಕ್ಕ ಸೂಟ್ಕೇಸ್ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ