ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜಬಲ್ಪುರ ರೈಲು ನಿಲ್ದಾಣದಲ್ಲಿ ಜನರ ಗುಂಪೊಂದು ನೃತ್ಯ ಮಾಡುವ ಮೂಲಕ ಕಾಶಿ ತಮಿಳು ಸಂಗಮಂ ಕಾರ್ಯಕ್ರಮಕ್ಕೆ ತೆರಳುವ ಜನರನ್ನು ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಈ ವಿಡಿಯೋವನ್ನು ರೈಲ್ವೆ ಸಚಿವಾಲಯ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಸಾಂಪ್ರದಾಯಿಕ ನೃತ್ಯ ಪ್ರದರ್ಶನವು ಡಿಸೆಂಬರ್ 16 ರಂದು ಕೊನೆಗೊಳ್ಳಲಿರುವ ‘ಕಾಶಿ ತಮಿಳು ಸಂಗಮಂ’ಗೆ ಹಾಜರಾಗುವ ಪ್ರಯಾಣಿಕರನ್ನು ಸ್ವಾಗತಿಸುವ ಭಾಗವಾಗಿತ್ತು.
#KashiTamilSangamam : दो संस्कृतियों का समागम!
‘काशी तमिल संगमम’ में हिस्सा लेने जा रहे चेन्नई-गया एक्सप्रेस (ट्रेन नं. 12390) के यात्रियों का जबलपुर स्टेशन पर हुआ जोरदार स्वागत, जहां महिला डेलीगेट्स ने पारंपरिक नृत्य के जरिए दिखाई अपनी संस्कृति की झलक। pic.twitter.com/808eLcNkj2
— Ministry of Railways (@RailMinIndia) December 14, 2022
‘ಕಾಶಿ ತಮಿಳು ಸಂಗಮಂ’ನಲ್ಲಿ ಭಾಗವಹಿಸಲು ಹೊರಟಿದ್ದ ಚೆನ್ನೈ-ಗಯಾ ಎಕ್ಸ್ಪ್ರೆಸ್ (ರೈಲು ಸಂಖ್ಯೆ. 12390) ಪ್ರಯಾಣಿಕರಿಗೆ ಜಬಲ್ಪುರ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು. ಅಲ್ಲಿ ಪ್ರತಿನಿಧಿಗಳು ಸಾಂಪ್ರದಾಯಿಕ ನೃತ್ಯದ ಮೂಲಕ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಿದರು ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.
ಡಿಸೆಂಬರ್ 14 ರಂದು ಪೋಸ್ಟ್ ಮಾಡಲಾದ ವಿಡಿಯೋ ಟ್ವಿಟರ್ನಲ್ಲಿ 11 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ವಿಡಿಯೋ ಮಿಶ್ರ ಪ್ರತಿಕ್ರಿಯೆಳು ವ್ಯಕ್ತವಾಗಿವೆ.
ಕೆಲವರು ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಚಟುವಟಿಕೆ ಏಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದರೆ, ಇತರರು ಸಂತೋಷದ ನೃತ್ಯವನ್ನು ನೋಡಿ ಸಂತೋಷಪಟ್ಟಿದ್ದಾರೆ.
‘ಕಾಶಿ ತಮಿಳು ಸಂಗಮಂ’ ಭಾರತ ಸರ್ಕಾರದ ಒಂದು ಉಪಕ್ರಮವಾಗಿದ್ದು, ವಾರಣಾಸಿ ಎಂದೂ ಕರೆಯಲ್ಪಡುವ ಕಾಶಿ ಮತ್ತು ತಮಿಳುನಾಡಿನ ನಡುವಿನ ಆಳವಾದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಳಕಿಗೆ ತರುವ ಉದ್ದೇಶವನ್ನು ಹೊಂದಿದೆ. ಸಂಗಮಂ ನವೆಂಬರ್ 16 2022 ರಂದು ಪ್ರಾರಂಭವಾಗಿದ್ದು, ಡಿಸೆಂಬರ್ 16 ರಂದು ಕೊನೆಗೊಳ್ಳುಲಿದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟ: ಈ ರೀತಿ ಚೆಕ್ ಮಾಡಿ
BIGG NEWS: ಗದಗ ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ಎಸ್.ಎನ್ ಪಾಟೀಲ ಇನ್ನಿಲ್ಲ
BIG NEWS : ಮದುವೆಯಾಗಲು ಇಷ್ಟವಿಲ್ಲದೆ ಪ್ರೇಯಸಿಯನ್ನು ಚಾಕುವಿನಿಂದ 49 ಬಾರಿ ಇರಿದು ಕೊಲೆ ; ಪ್ರಿಯಕರ ಅರೆಸ್ಟ್