ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು ಸದ್ಯ ಬಿಜೆಪಿಯ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅದರಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗ ಕಾಂತೇಶ್ ಗೆ ಕೂಡ ಈ ಬಾರಿ ಟಿಕೆಟ್ ದೊರಕಿಲ್ಲ.ಇದರಿಂದ ಸಿಡಿದೆದ್ದ ಕೆಎಸ್ ಈಶ್ವರಪ್ಪ ಕರ್ನಾಟಕದಲ್ಲಿ ಕುಟುಂಬದ ಕೈಯಲ್ಲಿ ಪಕ್ಷವೊಂದು ಸಿಕ್ಕಾಕೊಂಡಿದೆ. ಅದನ್ನು ರಕ್ಷಿಸಬೇಕಿದೆ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ‘CAA’ ಜಾರಿ ಕುರಿತು ಸಚಿವ ಸಂಪುಟದಲ್ಲಿ ಸಿಎಂ ತೀರ್ಮಾನ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಾಕೊಂಡಿದೆ.ಕುಟುಂಬದ ಕೈಯಿಂದ ಪಕ್ಷ ರಕ್ಷಿಸಬೇಕೆಂಬ ಒತ್ತಾಯವಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.ಕರ್ನಾಟಕದಲ್ಲಿ ಬೇರೆ ಯಾರು ಲಿಂಗಾಯತ ನಾಯಕರೆಲ್ವಾ? ಎಂದು ಕಿಡಿ ಕಾರಿದ್ದಾರೆ.
BREAKING : ಮಧ್ಯಪ್ರದೇಶದ ಸಿಯೋನಿಯಲ್ಲಿ ಪ್ರಭಲ ಭೂಕಂಪ ; 3.6 ತೀವ್ರತೆ ದಾಖಲು
ಬಿಎಸ್ ಯಡಿಯೂರಪ್ಪ ಪಟ್ಟು ಹಿಡಿದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ ಬೊಮ್ಮಾಯಿಗೆ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದಾರೆ.ನನ್ನ ಮಗ ಕೆಇ ಕಾಂತೇಶ್ ಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ? ನಾನು 40 ವರ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಸಿಟಿ ರವಿ, ನಳಿನ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ನನಗೆ ಸೇರಿದಂತೆ ನನ್ನ ಪುತ್ರನಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
‘IT’ ಇಲಾಖೆ ನೋಟಿಸ್ ಗೆ ತಡೆ ನೀಡುವಂತೆ ಕೋರಿದ ‘ಕಾಂಗ್ರೆಸ್’ ಅರ್ಜಿ ತಿರಸ್ಕರಿಸಿದ ದಿಲ್ಲಿ ‘ಹೈಕೋರ್ಟ್’
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಅಪೇಕ್ಷೆ ಪಡುವವರಲ್ಲಿ ನಾನು ಒಬ್ಬ. ನೀವು ಮತ್ತೆ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡಿ ನಾವು ಚುನಾವಣೆಗೆ ನಿಲ್ಲಿಸಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ ಎಂದು ಬೆಂಬಲಿಗರು ತಿಳಿಸಿದ್ದಾರೆ. 15 ರಂದು ಶುಕ್ರವಾರ ಸಂಜೆ 5:00 ಗಂಟೆಗೆ ಶಿವಮೊಗ್ಗದ ಬಣಜಾರ ಭವನದಲ್ಲಿ ಎಲ್ಲಾ ಸಮಾಜದ ಪ್ರಮುಖರು ಹಿರಿಯರು ಹಿತೈಷಿಗಳು ಈ ಸಭೆಯಲ್ಲಿ ಸೇರಲಿದ್ದಾರೆ. ಅವರೆಲ್ಲರ ಸಲಹೆ ಮೇಲೆ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.