ಶಿವಮೊಗ್ಗ: ಹೊನ್ನಾವರದಲ್ಲಿ ಪರೇಶ್ ಮೇಸ್ತ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಬಿಐ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಿತ್ತಾಟ ಶುರುವಾಗಿದೆ. ಇದೀಗ ಈ ಬಗ್ಗೆ ಶಿವಮೊಗ್ಗದಲ್ಲಿ ಕೆ. ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿ, ಪರೇಶ್ ಮೇಸ್ತ ಹತ್ಯೆ ಪ್ರಕರಣದ ಮರು ತನಿಖೆ ಆಗಬೇಕು ಎಂದು ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪರೇಶ್ ಮೇಸ್ತ ಹತ್ಯೆ ಪ್ರಕರಣದ ಮರು ತನಿಖೆ ಆಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸೇಕು. ನಾನು ಕೂಡ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ . ಆ ಸಂದರ್ಭದಲ್ಲಿ ಸರಿಯಾದ ತನಿಖೆ ಆಗಿಲ್ಲ ಎಂದು ವಾದ ಮಾಡುವಾಗಿಲ್ಲ. ಕುಟುಂಬಸ್ಥರು , ಹುಂದೂ ಯುವಕರು ಮರು ತನಿಖೆಗೆ ಆಗ್ರಹಿಸಿದ್ದಾರೆ , ಈ ಹಿನ್ನೆಲೆಯಲ್ಲಿ ಮರು ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಅದರ ನಂತರ ಯಾವುದೇ ವರದಿ ಬಂದರೂ ಒಪ್ಪಿಕೊಳ್ಳಬೇಕು ಎಂದರು.