ತುಮಕೂರು: ಅಪ್ರಾಪ್ತರಿಗೆ ಬೈಕ್ ಚಾಲನೆ ಮಾಡೋದಕ್ಕೆ ಕೊಡುವಂತ ಪೋಷಕರು ಎಚ್ಚರಿಕೆ ವಹಿಸೋದು ಒಳಿತು. ಇಲ್ಲವಾದಲ್ಲಿ ದಂಡ ಕಟ್ಟಿಟ್ಟ ಬುದ್ಧಿಯಾಗಿದೆ.
ಹೌದು.. ಹೀಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಪೊಲೀಸರಿಂದ ಅಪ್ರಾಪ್ತ ಬಾಲಕ ಬೈಕ್ ಚಾಲನೆ ಸಂದರ್ಭದಲ್ಲಿ ಬೈಕ್ ಜಪ್ತಿ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ತಿಪಟೂರು ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದಂತ ತಿಪಟೂರು ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಕೋರ್ಟ್ ನ್ಯಾಯಮೂರ್ತಿಗಳು ನಿಂಗರಾಜು ಎನ್ನುವಂತ ಅಪ್ರಾಪ್ತ ಬಾಲಕನ ಪೋಷಕರಿಗೆ 25,000 ದಂಡವನ್ನು ವಿಧಿಸಿದೆ. ಈ ಮೂಲಕ ಅಪ್ರಾಪ್ತನಿಗೆ ಬೈಕ್ ಚಾಲನೆಗೆ ನೀಡಿದಂತ ತಂದೆಗೆ ದಂಡದ ಶಾಕ್ ನೀಡಿದೆ. ಸೋ ಪೋಷಕರಾದಂತ ನೀವು ಎಚ್ಚರಿಕೆ ವಹಿಸಿ. ಅಪ್ರಾಪ್ತರಿಗೆ ಯಾವುದೇ ವಾಹನ ಚಾಲನೆ ನೀಡಲು ಕೊಡಬೇಡಿ ಎಂಬುದು ನಮ್ಮ ಮನವಿ ಕೂಡ ಆಗಿದೆ.
ಹೊನ್ನವಳ್ಳಿ ಪೊಲೀಸ್ ಠಾಣೆ: ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಕೊಟ್ಟಂತಹ ವಾಹನದ ಮಾಲೀಕನಿಗೆ 25000 ರೂ ಗಳ ದಂಡವನ್ನು ವಿಧಿಸಿದ CJ & JMFC ಕೋರ್ಟ್ ತಿಪಟೂರು.
ಅಪ್ರಾಪ್ತರು ವಾಹನ ಚಾಲನೆ ಮಾಡುವುದು & ವಾಹನ ಚಾಲನೆಗೆ ನೀಡುವುದು ಕಾನೂನುಗೆ ವಿರುದ್ಧವಾದುದ್ದು, ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ಕೊಡಬೇಡಿ.… pic.twitter.com/sIhHm8fLtd— SP Tumakuru (@SPTumkur) August 25, 2025
ಶಿವಮೊಗ್ಗ: ನಾಳೆ ಶಾಲಾ-ಕಾಲೇಜು ಮುಖ್ಯಸ್ಥರಿಗೆ ಮಳೆಯ ಕಾರಣ ರಜೆ ಅಧಿಕಾರ- ಸೊರಬ ತಹಶೀಲ್ದಾರ್
ರಾಜ್ಯದ SC ಸಮುದಾಯದ ಯುವಕ-ಯುವತಿಯರಿಗೆ ಗುಡ್ ನ್ಯೂಸ್: 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ