Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

14/02/2026 12:25 PM

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM

ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ : ಮೈಮೇಲಿನ ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ!

14/02/2026 12:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ನಿಮ್ಮ ಮಕ್ಕಳನ್ನು `ಮಿಲಿಟರಿ ಕಾಲೇಜಿಗೆ’ ಸೇರಿಸಬೇಕಾ? 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ
KARNATAKA

ಪೋಷಕರೇ ನಿಮ್ಮ ಮಕ್ಕಳನ್ನು `ಮಿಲಿಟರಿ ಕಾಲೇಜಿಗೆ’ ಸೇರಿಸಬೇಕಾ? 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ

By kannadanewsnow5714/02/2026 12:14 PM

ಜನವರಿ 2027ನೇ ಅಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2026ರ ಜೂನ್ 07ರ ಭಾನುವಾರ ದಂದು ನಡೆಸಲಾಗುವುದು.

ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ: 01-01-2027 ರಂತೆ 11ಳಿ ವರ್ಷದಿಂದ 13 ವರ್ಷದೊಳಗಿರುವ (ಅಂದರೆ ದಿನಾಂಕ 02-01-2014 ರಿಂದ 01-07-2015ರೊಳಗೆ ಜನಿಸಿರುವ) ಬಾಲಕರು ಮತ್ತು ಬಾಲಕಿಯರು ಮಾತ್ರ ಸದರಿ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಈ ಸಂಸ್ಥೆಯ ಮುಖ್ಯ ಗುರಿ ಯುವಕ ಮತ್ತು ಯುವತಿಯರನ್ನು ದೇಶದ ಸಶಸ್ತç ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಈ ನಿಟ್ಟಿನಲ್ಲಿ ಯುವಕ ಮತ್ತು ಯುವತಿಯರಿಗೆ ಸರ್ವ ರೀತಿಯ ವಿಧ್ಯಾಭ್ಯಾಸ/ತರಬೇತಿ ನೀಡುವುದು.

ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿಧ್ಯಾಭ್ಯಾಸ ಶುಲ್ಕ ಸಾಮಾನ್ಯ ವರ್ಗಕ್ಕೆ ರೂ.98650 ಗಳು. ಹಾಗೂ ಎಸ್‌ಸಿ ಎಸ್‌ಟಿ ಗೆ ರೂ 81850 ಗಳಾಗಿರುತ್ತದೆ. ಇದು ಕಾಲ ಕಾಲಕ್ಕೆ ಹೆಚ್ಚಾಗಬಹುದು. ವಿಧ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ಪ್ರವೇಶ ಸಮಯದಲ್ಲಿ ರೂ.50,000/-ಭದ್ರತಾ ಠೇವಣಿ ನೀಡಬೇಕಾಗುತ್ತದೆ. ಸದರಿ ಮೊತ್ತವನ್ನು ವಿದ್ಯಾರ್ಥಿಯು ಪದವೀಧರನಾದ ಮತ್ತು ವಿಧ್ಯಾರ್ಥಿನಿ ಪದವೀಧರೆಯಾದ ಬಳಿಕ ಹಿಂತಿರುಗಿಸಲಾಗುವುದು.

ಅರ್ಜಿ ನಮೂನೆಗಳನ್ನು ಪಡೆಯುವ ವಿಧಾನ. ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟಿçÃಯ ಭಾರತೀಯ ಮಿಲಿಟರಿ ಕಾಲೇಜ್, ಘಡಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್, ಪಿನ್ – 248003 ಮೂಲಕ ಪಡೆಯಬಹುದು.

ಬೇಡಿಕೆ ಹುಂಡಿ (ಡಿಡಿ) ಕಳುಹಿಸುವ ಮೂಲಕ: ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/-ಗಳ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ.555/-ಗಳ ಬೇಡಿಕೆಯ ಹುಂಡಿಯನ್ನು ಲಿಖಿತ ವಿನಂತಿಯ ಜೊತೆಯಲ್ಲಿ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರದೊಂದಿಗೆ ಕಳುಹಿಸಬಹುದು.

ದಿ ಕಮೆಂಡAಟ್ ರಿಮ್ಕ ಫಂಡ್ ಪೇಬಲ್ ಅಟ್ ಎಚ್‌ಡಿಎಫ್‌ಸಿ ಬ್ಯಾಂಕ್ ಬಳ್ಳಾಪುರ ಚೌಕ್ ಡೆಹ್ರಾಡೂನ್ ಬ್ಯಾಂಕ್ ಕೋಡ್ 1399 ಉತ್ತರಾಖಂಡ ( “THE COMMANDANT RIMC FUND” PAYABLE AT HDFC BANK, BALLUPUR CHOWK,DEHRADUN (BANK CODE. 1399), UTTARAKHAND) ಈ ವಿಳಾಸ, ಪಿನ್ ಕೋಡ್ ಮತ್ತು ಸಂಪರ್ಕ ಸಂಖ್ಯೆಯೊAದಿಗೆ ದೊಡ್ಡ ಅಕ್ಷರಗಳಲ್ಲಿ ಟಯಿಪ್ ಮಾಡಿ ಬರೆಯಬೇಕು. ಕಾನೂನು ಬಾಹಿರ ಅಥವಾ ಅಪೂರ್ಣ ವಿಳಾಸದಿಂದ ಉಂಟಾಗುವ ಪ್ರಾಸ್ಪೆಕ್ಟಸ್‌ನ ಸಾಗಾಣಿಕೆಯಲ್ಲಿ ಯಾವುದೇ ಅಂಚೆ ವಿಳಂಬ ಅಥವಾ ನಷ್ಟಕ್ಕೆ ಆರ್‌ಐಎಮ್‌ಸಿ ಸಂಸ್ಥೆಯು ಜವಾಬ್ದಾರರಾಗಿರುವುದಿಲ್ಲ.

ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಕೆಳಗಿನ ಅಡಕಗಳೊಂದಿಗೆ ದಿನಾಂಕ 05-04-2026 ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಭವನ್, ನಂ.58 ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ರಸ್ತೆ, ಬೆಂಗಳೂರು – 25, ಇವರಿಗೆ, ಸಲ್ಲಿಸತಕ್ಕದ್ದು.

ಮುನ್ಸಿಪಾಲಿಟಿ/ ಗ್ರಾಮ ಪಂಚಾಯತ್ ಪ್ರಾಧಿಕಾರ ವತಿಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ಪ್ರಮಾಣ ಪತ್ರದ ಧೃಢೀಕೃತ ಪ್ರತಿ. 4 ಪಾಸ್‌ಪೋರ್ಟ್ ಸೈಜಿನ ಭಾವಚಿತ್ರಗಳು.(ಅರ್ಜಿಗಳಲ್ಲಿ ಅಂಟಿಸಿದ ಭಾವಚಿತ್ರವನ್ನು ಸೇರಿಸಿ). ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ಧೃಢೀಕೃತ ಪ್ರತಿ (ಆಂಗ್ಲ ಭಾಷೆಯಲ್ಲಿ ಇರುವಂತೆ ಮಾತ್ರ). ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ ಅಂಚೆದ್ವಾರ ರವಾನಿಸಲು ಹೊರ ಜಿಲ್ಲೆಗೆ ರೂ. 56 ಹಾಗೂ ಬೆಂಗಳೂರು ನಗರ ವ್ಯಾಪ್ತಿಗೆ ರೂ.23 ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆ. ಶಾಲಾ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರದ ಮೂಲ ಪ್ರತಿ (ಧೃಢೀಕರಿಸಿದ ಅಭ್ಯರ್ಥಿಯ ಭಾವ ಚಿತ್ರದೊಂದಿಗೆ). ಕರ್ನಾಟಕ ರಾಜ್ಯದ ಮೂಲವಾಸಸ್ಥಾನ ಧೃಡೀಕರಣ ಪತ್ರ (ತಹಸೀಲ್ದಾರರಿಂದ). (in English version only). ಆಧಾರ್ ಕಾರ್ಡ್ ಪ್ರತಿ(ಕಡ್ಡಾಯ). ಹೆಚ್ಚಿನ ಮಾಹಿತಿಗಾಗಿ ಇ.ಮೇಲ್: dirdswrblr@gmail.com, ದೂರವಾಣಿ ಸಂಖ್ಯೆ: 080-25589459ಗೆ ಕರೆ ಮಾಡಬಹುದು ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Parents should you admit your children to 'military college'? Application submission for 8th grade admission begins
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

14/02/2026 12:25 PM1 Min Read

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM2 Mins Read

ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ : ಮೈಮೇಲಿನ ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ!

14/02/2026 12:16 PM1 Min Read
Recent News

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

14/02/2026 12:25 PM

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM

ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ : ಮೈಮೇಲಿನ ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ!

14/02/2026 12:16 PM

ಪೋಷಕರೇ ನಿಮ್ಮ ಮಕ್ಕಳನ್ನು `ಮಿಲಿಟರಿ ಕಾಲೇಜಿಗೆ’ ಸೇರಿಸಬೇಕಾ? 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ

14/02/2026 12:14 PM
State News
KARNATAKA

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

By kannadanewsnow5714/02/2026 12:25 PM KARNATAKA 1 Min Read

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿಯಲ್ಲಿ…

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM

ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ : ಮೈಮೇಲಿನ ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ!

14/02/2026 12:16 PM

ಪೋಷಕರೇ ನಿಮ್ಮ ಮಕ್ಕಳನ್ನು `ಮಿಲಿಟರಿ ಕಾಲೇಜಿಗೆ’ ಸೇರಿಸಬೇಕಾ? 8ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ

14/02/2026 12:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.