ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚೆಗೆ ಮಕ್ಕಳನ್ನು ಸಾಕಲು ಸಾಕಷ್ಟು ಜನ ಪರದಾಡುತ್ತಿದ್ದಾರೆ. ಯಾಕಂದರೆ ಇಂದಿನ ದಿನದಲ್ಲಿ ಅಪ್ಪ- ಅಮ್ಮಾ ಕೆಲಸಕ್ಕೆ ಹೋಗುತ್ತಾರೆ ಹೀಗಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದಕ್ಕೆ ಆಗ್ತಿಲ್ಲ. ನಮ್ಮ ಒತ್ತಡದ ಜೀವನ ಶೈಲಿಯಿಂದಾಗಿ ಅದನ್ನು ನಾವು ಕೆಲಸವಾಗಿ ನೋಡುತ್ತೇವೆ.
BIGG NEWS: ಸಬ್ ಅರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ ಘೋಷಣೆ
ಹೀಗಾಗಿಯೇ ಮಕ್ಕಳ ಮೇಲೆ ಹೆತ್ತವರ ಕಾಳಜಿ ಅಥವಾ ಗಮನ ಕಡಿಮೆಯಾಗುತ್ತಿದೆ.ಅವರು ತಮ್ಮ ಘನತೆಯನ್ನು ಉಳಿಸಿಕೊಂಡು, ಇತರರನ್ನು ಗೌರವಿಸುವಂತೆ ಬೆಳೆಸಬೇಕು. ಅದಕ್ಕಾಗಿಯೇ ಮಕ್ಕಳಿಗೆ ಕೆಲವೊಂದು ಸೂಕ್ಷ್ಮವಾದ ವಿಷಯಗಳನ್ನು ಹೇಳಿಕೊಡಬೇಕು.
ಸಮಾನತೆ ಬಗ್ಗೆ ಹೇಳಿಕೊಡಬೇಕು
ಕೆಲವು ಮನೆಗಳಲ್ಲಿ ಮಗ ಹಾಗೂ ಮಗಳನ್ನು ಭಿನ್ನವಾಗಿ ನೋಡುತ್ತಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ಮನಸ್ಥಿತಿ ಇರುತ್ತದೆ. ಆ ನಿಟ್ಟಿನಲ್ಲಿ ಪಾಲಕರು ಸಾಕಷ್ಟು ಬದಲಾಗಬೇಕು.
ಸಹಾಯ ಮಾಡುವುದನ್ನು ಹೇಳಿಕೊಡಿ
ಇತರರಿಗೆ ಸಹಾಯ ಮಾಡುವುದನ್ನು ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು. ತಿಳಿದಿರುವವರಿಗೆ ಮಾತ್ರವಲ್ಲದೆ, ಅಸಹಾಯಕರಿಗೂ ನೀವು ಸಹಾಯ ಮಾಡಬಹುದು ಎಂದು ಹೇಳಿ. ಸಣ್ಣಪುಟ್ಟ ಉಪಕಾರಗಳನ್ನು ಮಾಡಲು ಅವರಿಗೆ ಹೇಳಿಕೊಡಿ.
ಗೌರವ ಕೊಡುವುದನ್ನು ಹೇಳಿಕೊಡಿ
ಜಾತಿ ಮತ್ತು ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಗೌರವಿಸಲು ಪ್ರತಿಯೊಬ್ಬ ಮನುಷ್ಯನಿಗೆ ಕಲಿಸಬೇಕು. ಅವರು ಭೇಟಿಯಾಗುವ ಪ್ರತಿಯೊಬ್ಬ ಮನುಷ್ಯನನ್ನು ಗೌರವಿಸಲು ಹೇಳಿಕೊಡಿ. ತನಗಿಂತ ಚಿಕ್ಕವರನ್ನು ಪ್ರೀತಿಯಿಂದ ಕಾಣುವುದನ್ನು ಕಲಿಸಿ. ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿ.
BIGG NEWS: ಸಬ್ ಅರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ ಘೋಷಣೆ
ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು
ಮಕ್ಕಳು ಕೋಪ ಮಾಡಿಕೊಳ್ಳಲು ನೀವು ಅವಕಾಶ ಮಾಡಿಕೊಡಬೇಡಿ. ಕೆಲವು ಮಕ್ಕಳು ಕೋಪಗೊಂಡಾಗ ವಸ್ತುಗಳನ್ನು ಎಸೆಯುತ್ತಾರೆ. ಇಲ್ಲದ ರಂಪಾಟ ಮಾಡುತ್ತಾರೆ.ಮಕ್ಕಳು ನಿಧಾನವಾಗಿ ನೆನೆಪಿಟ್ಟುಕೊಳ್ಳುತ್ತಾರೆ. ಹಾಗೂ ಅದನ್ನೇ ಪಾಲಿಸುತ್ತಾರೆ.
ಯಾರೂ ಕೀಳಲ್ಲ
ಬಡವ-ಶ್ರೀಮಂತ, ಕಪ್ಪು-ಬಿಳಿ, ಹೆಣ್ಣು-ಗಂಡು, ಹೀಗೆ ಯಾವುದೇ ಕಾರಣಕ್ಕೂ ಯಾರನ್ನೂ ಅವರವರ ಬಣ್ಣ, ನೋಟ, ಸ್ಥಾನಮಾನ ನೋಡಿ ಕೀಳಾಗಿ ಮಾತನಾಡಬಾರದು. ಯಾವುದೇ ವ್ಯಕ್ತಿಯನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ಅವರಿಗೆ ವಿವರಿಸಬೇಕು.