ಶಿವಮೊಗ್ಗ : ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ/ ಶ್ರೀ ನಾರಾಯಣ ಗುರು/ ಶ್ರೀಮತಿ ಇಂದಿರಾಗಾಂಧಿ / ಡಾ|| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಪ.ಜಾ/ಪ.ವ./ಸಾಮಾನ್ಯ/ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತ ವಿದ್ಯಾರ್ಥಿಗಳು ಆಯಾ ತಾಲೂಕಿನ ಮೇಲ್ಕಂಡ ವಸತಿ ಶಾಲೆಗಳ ಮೂಲಕ ಜ.25 ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವುದು. ಪ.ಜಾ./ಪ.ವ. ಹಾಗೂ ಹಿಂ.ವ. ಪ್ರವರ್ಗ-1 ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯವು ರೂ.2.50 ಲಕ್ಷ, ಮತ್ತು ಹಿಂ.ವ. 2ಎ ,2ಬಿ, 3ಎ ಮತ್ತು 3ಬಿ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯವು ರೂ. 1.00 ಲಕ್ಷಗಳ ಮಿತಿಯೊಳಗಿರಬೇಕು. ಪ್ರವೇಶ ಪರೀಕ್ಷೆಯು ದಿ: 15/02/2025 ರಂದು ನಡೆಯಲಿದ್ದು, ಪ್ರವೇಶ ಪತ್ರಗಳನ್ನು ಫೆ.06ರಿಂದ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-249241/080-23460460 ಅಥವಾ ಆಯಾ ತಾಲೂಕಿನ ಹತ್ತಿರದ ವಸತಿ ಶಾಲೆ, ಅಥವಾ http://kreis.kar.nic.in, http://kea.kar.nic.in ವೆಬ್‌ಸೈಟ್‌ಗಳ ಮಾಹಿತಿ ಪುಸ್ತಕ-2025ನ್ನು ಸಂಪರ್ಕಿಸುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.