ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೆಣ್ಣು ಮಕ್ಕಳ ಸಬಲಿಕರಣಕ್ಕಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಸೇರಿ ಹಲವು ಯೋಜನೆಗಳನ್ನ ನಡೆಸ್ತಿದೆ. ಅದ್ರಲ್ಲಿ ಒಂದು ಈ “CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ”. ಈ ಯೋಜನೆಯಡಿ ಸರ್ಕಾರ, ಒಂದೇ ಹೆಣ್ಣು ಮಗು ಹೊಂದಿರುವ ಪೋಷಕರಿಗೆ 12 ಸಾವಿರ ಸ್ಕಾಲರ್ಶಿಪ್ ನೀಡ್ತಿದೆ.
ಆರ್ಥಿಕವಾಗಿ ಹಿಂದುಳಿದ, ಸರಿಯಾದ ಶಿಕ್ಷಣ ಪಡೆಯಲಾಗದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಬಹುಪಾಲು ಶುಕ್ಷಣ ವಂಚಿತರಾಗುತ್ತಾರೆ. ಹಾಗಾಗಿ ಇದನ್ನ ತಪ್ಪಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ನಡೆಸ್ತಿದೆ. ಅದ್ರಂತೆ, ನೀವು ಕೂಡ ಹೆಣ್ಣು ಮಗುವಿನ ಪೋಷಕರಾಗಿದ್ರೆ, ಈ ಯೋಜನೆಯ ಲಾಭ ಪಡೆಯಬೋದು.
ಇದನ್ನ ಕೇಂದ್ರ ಸರ್ಕಾರ ಜಾರಿ ಮಾಡಿದ್ದು, CBSE (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಮೆರಿಟ್ ಆಧಾರ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿ ಸ್ಕಾಲರ್ಶಿಪ್ ನೀಡುತ್ತೆ.
ವಿದ್ಯಾರ್ಥಿ ವೇತನ ಹೇಗೆ ಹಂಚಿಕೆ ಮಾಡಲಾಗುತ್ತೆ..?
ನಿರ್ದಿಷ್ಟ ವರ್ಷದ ವಿದ್ಯಾರ್ಥಿ ವೇತನಗಳ ಸಂಖ್ಯೆಯು ವೇರಿಯಬಲ್ ಆಗಿದ್ದು, 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನ ಗಳಿಸಿದ ಕುಟುಂಬದ ಒಬ್ಬ ಹೆಣ್ಣು ಮಗುವಿಗೆ ಪ್ರಯೋಜನೆ ನೀಡಲಾಗುತ್ತೆ.
ಅರ್ಹತಾ ಮಾನದಂಡ..!
CBSE 10 ನೇ ತರಗತಿ ಪರೀಕ್ಷೆಯಲ್ಲಿ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಮತ್ತು CBSE ಯೊಂದಿಗೆ ಸಂಯೋಜಿತವಾಗಿರುವ ಶಾಲೆಯಲ್ಲಿ 11 ಮತ್ತು 12ನೇ ತರಗತಿ ಓದುತ್ತಿರುವ ಎಲ್ಲಾ ಹೆಣ್ಣು ಮಗುವಿಗೆ, ಅವರ ಬೋಧನಾ ಶುಲ್ಕ ರೂ. ಶೈಕ್ಷಣಿಕ ವರ್ಷದಲ್ಲಿ ತಿಂಗಳಿಗೆ 1,500 ನೀಡಲಿದೆ.
ಈ ಯೋಜನೆಯ ಕುರಿತ ಹೆಚ್ಚನ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ www.cbse.nic.in ಗೆ ಭೇಟಿ ನೀಡಬೋದು.