ಬೆಂಗಳೂರು : ಇತ್ತೀಚಿಗೆ ಬಹುತೇಕ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡಿ ಅವರ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಲು ಅವರೆ ಕಾರಣರಾಗುತ್ತಿದ್ದಾರೆ.ಅಪ್ರಾಪ್ತ ಮಕ್ಕಳಿಗೆ ಬೈಕ್ ಸೇರಿದಂತೆ ವಾಹನ ಚಲಾಯಿಸಲು ನೀಡುವ ಮುನ್ನ ಪೋಷಕರು ಯೋಚಿಸಿ. ನೀವು ಮಕ್ಕಳಿಗೆ ವಾಹನ ನೀಡಿ ದರೆ ನ್ಯಾಯಾಲಯದಲ್ಲಿ ರೂ.25 ಸಾವಿರಕ್ಕಿಂತ ಹೆಚ್ಚಿನ ಲೆಕ್ಕದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಚ್ಚರ.
ಹೌದು ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಹಾಗೂ ರಾಜಧಾನಿಯ ರಸ್ತೆಗಳಲ್ಲಿ ಬೈಕ್ನಲ್ಲಿ ವೀಲಿಂಗ್ ಕಸರತ್ತಿಗೆ ಕಡಿವಾಣ ಹಾಕಲು ಮುಂದಾಗಿರುವ ಸಂಚಾರ ವಿಭಾಗದ ಪೊಲೀಸರು, ಈಗ ಅಪ್ರಾಪ್ತ ಮಕ್ಕಳ ಪೋಷಕರಿಗೆ ಬಿಸಿ ಮುಟ್ಟಿಸಿದ್ದಾರೆ.
ವೀಲಿಂಗ್ ಮಾಡಿ ಸಿಕ್ಕಿಬೀಳುವವರಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದಾರೆ. ಹೀಗಾಗಿ ಅಪ್ರಾಪ್ತರಿಗೆ ಬೈಕ್ ಓಡಿಸಲು ನೀಡಿದ ತಪ್ಪಿಗೆ ಅವರ ಪೋಷಕರಿಗೆ ದಂಡ ವಿಧಿಸಿ 10 ರಿಂದ 5 ಲಕ್ಷಮೌಲ್ಯದಬಾಂಡ್ ಪಡೆಯಲಾಗುತ್ತಿದೆ. ಉತ್ತರ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ವೀಲಿಂಗ್ ಮಾಡುತ್ತಿದ್ದ 16 ಜನರ ಪತ್ತೆ ಹಚ್ಚಿ ಪರಿಶೀಲಿಸಿದಾಗ ಎಲ್ಲರೂ ಅಪ್ರಾಪ್ತರಾಗಿದ್ದರು.
ಆಗ ಅವರ ಪಾಲಕರಿಂದ 5 ಲಕ್ಷ ವರೆಗಿನ ಬಾಂಡ್ ಓವರ್ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪ್ರಾಪ್ತ ವಯ ಸ್ಸಿನ ಮಕ್ಕಳಿಗೆ ವಾಹನ ಸವಾರಿ ಮಾಡಲು ನೀಡಿದ ತಪ್ಪಿಗೆ ನ್ಯಾಯಾಲಯದಲ್ಲಿ ಪೋಷಕರು ದಂಡ ಪಾವತಿಸಿದ್ದಾರೆ. ವಾಹನ ಜಪ್ತಿ ಸಹ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.