ಚಿತ್ರದುರ್ಗ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳ 2024-25ನೇ ಸಾಲಿನ 7, 8 ಮತ್ತು 9ನೇ ತರಗತಿಗಳ ಖಾಲಿ ಸ್ಥಾನಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಸಮೀಪದ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ವಸತಿ ಶಾಲೆಗಳಲ್ಲಿ ಪ್ರಸ್ತುತ ಖಾಲಿ ಇರುವ ಹಾಗೂ ಮುಂದೆ ಖಾಲಿ ಆಗಬಹುದಾದ ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಸರ್ಕಾರದ ಮೀಸಲಾತಿ ಅನುಸಾರ ಆಯ್ಕೆಗೆ ಪರಿಗಣಿಸಲಾಗುವುದು.
ವಸತಿ ಶಾಲೆಗಳಲ್ಲಿ ಖಾಲಿ ಇರುವ ಸ್ಥಾನಗಳ ವಿವರ ಇಂತಿದೆ. 7 ತರಗತಿ ಪ್ರವೇಶಾತಿ ಖಾಲಿ ಸ್ಥಾನಗಳಲ್ಲಿ ಎಸ್‍ಸಿ-4 ಬಾಲಕಿಯರು, ಎಸ್ ಟಿ-1 ಬಾಲಕ, 4 ಬಾಲಕಿಯರು, ಪ್ರವರ್ಗ-2ಎ 1 ಬಾಲಕ ಸೇರಿದಂತೆ ಒಟ್ಟು 10 ಸ್ಥಾನಗಳು ಖಾಲಿ ಇವೆ. 8ನೇ ತರಗತಿ ಪ್ರವೇಶಾತಿ ಖಾಲಿ ಸ್ಥಾನಗಳಲ್ಲಿ ಎಸ್‍ಸಿ-5 ಬಾಲಕರು, 3 ಬಾಲಕಿಯರು, ಎಸ್.ಟಿ-5 ಬಾಲಕರು, 5 ಬಾಲಕಿಯರು, ಪ್ರವರ್ಗ1-4 ಬಾಲಕರು, 3 ಬಾಲಕಿಯರು, 2ಎ-3 ಬಾಲಕಿಯರು, 3ಬಿ 1 ಬಾಲಕ ಸೇರಿದಂತೆ ಒಟ್ಟು 29 ಸ್ಥಾನಗಳು ಖಾಲಿ ಇವೆ. 9ನೇ ತರಗತಿ ಪ್ರವೇಶಾತಿ ಖಾಲಿ ಸ್ಥಾನಗಳಲ್ಲಿ ಎಸ್.ಸಿ-2 ಬಾಲಕರು, 3 ಬಾಲಕಿಯರು, ಎಸ್.ಟಿ-7 ಬಾಲಕರು, 3 ಬಾಲಕಿಯರು, ಪ್ರವರ್ಗ1-1 ಬಾಲಕ, 1 ಬಾಲಕಿ, 2ಎ-1 ಬಾಲಕ, 3ಎ-1ಬಾಲಕ, 1ಬಾಲಕಿ, 3ಬಿ-1 ಬಾಲಕಿ ಸೇರಿದಂತೆ ಒಟ್ಟು 21 ಸ್ಥಾನಗಳು ಖಾಲಿ ಇವೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 1 ಸಂಜೆ 5.30 ಆಗಿದ್ದು, ಪ್ರವೇಶ ಪರೀಕ್ಷೆಯು ಜುಲೈ 6ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕ್ರೈಸ್ ವಸತಿ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.