Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವುದೇ ಜಾತಿ, ಧರ್ಮದ ರೆಕಮಂಡ್ ಇರಲ್ಲ , ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿ : ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚನೆ

ಜನ ಮೆಚ್ಚುವಂತೆ ಕೆಲಸ ಮಾಡಿ, ಸರ್ಕಾರಕ್ಕೂ ಒಳ್ಳೆ ಹೆಸರು ತಂದು, ನೀವು ಹೆಸರು ಮಾಡಿ : ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು : ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆ ಶಿವಕುಮಾರ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದೆಯಾ? ಇವೇ ಕಾರಣಗಳಿರಬಹುದು ನೋಡಿ
KARNATAKA

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದೆಯಾ? ಇವೇ ಕಾರಣಗಳಿರಬಹುದು ನೋಡಿ

By kannadanewsnow57

ಕೆಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಆರೋಗ್ಯ ಎನ್ನುವುದು ಎಲ್ಲರಿಗೂ ಮುಖ್ಯವಾಗಿರುತ್ತದೆ. ದೇಹ ಸುಸ್ಥಿತಿಯಲ್ಲಿದ್ದರೆ ಮಾತ್ರ ದಿನನಿತ್ಯದ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಅದು ಮಕ್ಕಳ ವಿಷಯದಲ್ಲಿಯೂ ಅನ್ವಯವಾಗುತ್ತದೆ. ಈಗಂತೂ ಸಾಂಕ್ರಾಮಿಕ ಕಾಯಿಲೆಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳುವದು ತುಸು ಕಷ್ಟದ ಕೆಲಸವೇ ಸರಿ. ಇತ್ತೀಚೆಗೆ ಕೊರೋನಾ ಅಬ್ಬರ ಕಡಿಮೆಯಾಗುತ್ತಿದೆ. ಆದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಚೇರಿಗಳು ಆನ್ಲೈನ್‌ ಕೆಲಸಕ್ಕೆ ಅಂತ್ಯ ಹಾಡಿ ಆಫೀಸ್‌ಗೆ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ. ಅದೇ ರೀತಿ ಶಾಲೆಗಳೂ ಕೂಡ ಮಕ್ಕಳಿಗೆ ಆನ್ಲೈನ್‌ ಬದಲಿಗೆ ಭೌತಿಕವಾಗಿ ಪಾಠಮಾಡಲು ಆರಂಭಿಸಿವೆ. ಆದರೆ ಸಮಸ್ಯೆ ಎಂದರೆ ಶಾಲೆಗೆ ಹೋಗುವ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು.

ಅದಕ್ಕೆ ಹಲವು ಕಾರಣಗಳಿದೆ. ಆಹಾರ, ಜೀವನ ಶೈಲಿ ಒಂದು ರೀತಿಯಲ್ಲಿ ಕಾರಣವಾದರೆ ಮಕ್ಕಳು ಇರುವ ವಾತಾವರಣ ಕೂಡ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಇದನ್ನು ಹೊರತುಪಡಿಸಿ ಇನ್ನೂಂದಿಷ್ಟು ಕಾರಣಗಳಿಂದ ಮಕ್ಕಳು ಆಗಾಗ ಹುಷಾರಿಲ್ಲದಂತೆ ಆಗುತ್ತಾರೆ. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಸರಿಯಾಗಿ ಆಹಾರ ತಿನ್ನದೇ ಇರುವುದು, ಪೌಷ್ಟಿಕಾಂಶಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಪರಿಣಾಮ ಆಗಾಗ ಶೀತ, ಕೆಮ್ಮು, ಜ್ವರದಂತಹ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಕೆಲವೊಮ್ಮೆ ಹವಾಮಾನ ಬದಲಾವಣೆ ಕೂಡ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ, ಕಲುಷಿತ ನೀರಿನ ಸೇವನೆ, ಸ್ವಚ್ಛತೆಯ ಕೊರತೆಯಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಇದರಿಂದಾಗಿ ಮಕ್ಕಳು ಜೀವನಶೈಲಿಯಲ್ಲಿ ಸಣ್ಣ ವ್ಯತ್ಯಾಸವಾದರೂ ಅನಾರೋಗ್ಯ ಪೀಡಿತರಾಗುತ್ತಾರೆ. ಇದನ್ನು ತಪ್ಪಿಸಲು ಪೌಷ್ಟಿಕ ಆಹಾರವನ್ನು ನೀಡಬೇಕು. ಅದೇ ರೀತಿ ಸ್ವಚ್ಛತೆಯೆಡೆಗೆ ಮಕ್ಕಳು ಹೆಚ್ಚು ಗಮಹರಿಸುವಂತೆ ಮಾಡಿದರೆ ಕಾಯಿಲೆಯ ಅಪಾಯದಿಂದ ದೂರವಿರಬಹದು.

ಮಕ್ಕಳು ಸದಾ ಚಟುವಟಿಕೆಯಿಂದ ಇದ್ದರೆ ಮಾತ್ರ ಆರೋಗ್ಯವಂತರಾಗಿರುತ್ತಾರೆ.

ಇಲ್ಲವಾದರೆ ಜಡತ್ವದಿಂದ ಅವರ ದೇಹಕ್ಕೂ ಅನೇಕ ಕಾಯಿಲೆಗಳು ಅಂಟಿಕೊಳ್ಳಬಹುದು

. ಇನ್ನು ಶಾಲೆಗೆ ಹೋದಾಗ ಮಕ್ಕಳೊಂದಿಗೆ ಮಣ್ಣು, ಕೆಸರಿನಲ್ಲಿ ಆಟವಾಡಿದಾಗ ಬ್ಯಾಕ್ಟೀರಿಯಾಗಳು ದೇಹ ಸೇರಿ ಅನಾರೋಗ್ಯ ಉಂಟಾಗುವಂತೆ ಮಾಡುತ್ತದೆ. ಆದ್ದರಿಂದ ಮಕ್ಕಳನ್ನು ಸದಾ ಕ್ರೀಯಾಶೀಲರನ್ನಾಗಿಸಿಡಬೇಕು.

ಮಕ್ಕಳೊಂದಿಗೆ ಬೆರೆಯುವಾಗಲೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಪದೇ ಪದೇ ಕಾಯಿಲೆ ಬೀಳುವುದು ತಪ್ಪುತ್ತದೆ.

ಇನ್ನು ಶುಚಿತ್ವ ಮತ್ತು ಆರೋಗ್ಯ ಸೇವನೆಯ ಬಗ್ಗೆ ಹೆಚ್ಚು ಎಚ್ಚರಿಕೆವಹಿಸಿ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಇಂದಿನ ದಿನಗಳಲ್ಲಿ ಚಿಕ್ಕಮಕ್ಕಳೂ ಕೂಡ ಮೊಬೈಲ್‌, ಟಿವಿ ದಾಸರಾಗುತ್ತಿದ್ದಾರೆ. ಮಧ್ಯರಾತ್ರಿ ಕಳೆದರೂ ಮೊಬೈಲ್‌ ನೋಡುವುದು ಹವ್ಯಾಸವಾಗಿಬಿಟ್ಟಿದೆ.

ಇದರಿಂದ ಸರಿಯಾಗಿ ನಿದ್ದೆ ಆಗುವುದಿಲ್ಲ. ಮಕ್ಕಳ ಆರೋಗ್ಯ ಸರಿಯಾಗಿರಬೇಕೆಂದರೆ 9 ಗಂಟೆಗಳ ನಿದ್ದೆ ಅಗತ್ಯವಾಗಿರುತ್ತದೆ. ನಿದ್ದೆ ಕಡಿಮೆಯಾದಂತೆ ಅನಾರೋಗ್ಯದ ಪಟ್ಟಿಯೇ ಬೆಳೆಯುತ್ತದೆ.

ಕಣ್ಣಿನ ಸಮಸ್ಯೆ, ತಲೆನೋವು, ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಖಿನ್ನತೆ, ಆತಂಕದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣದಿಂದ ದೇಹದಲ್ಲಿ ಶಕ್ತಿ ಇಲ್ಲದಂತಾಗಿ ಸದಾ ಸುಸ್ತು, ಬಳಲಿಕೆ ಕಾಡುತ್ತದೆ. ಶಾಲೆಗೆ ಹೋಗಲು, ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗದಂತಹ ಸ್ಥಿತಿ ಎದುರಾಗುತ್ತದೆ.

ಮಕ್ಕಳಿಗೆ ಹಣ್ಣು ತರಕಾರಿಗಳಿಗಿಂತ ಪಿಜ್ಜಾ, ಬರ್ಗರ್‌ಗಳಂತಹ ಜಂಕ್‌ಫುಡ್‌ಗಳ ಕಡೆಗೇ ಹೆಚ್ಚು ಒಲವು. ಪರಿಣಾಮ ಅನಾರೋಗ್ಯ. ಶಾಲೆಗೆ ತೆರಳುವಾಗಲೂ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ಹುಷಾರಿಲ್ಲದೆ ಮಲಗುವುದು ಸಾಮಾನ್ಯವಾಗುತ್ತದೆ. ಬುತ್ತಿಯಲ್ಲಿಯೂ ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಮಧ್ಯಾಹ್ನ ಹಸಿದ ಹೊಟ್ಟೆಗೆ ವಿಷ ನೀಡಿದಂತೆಯೇ ಸರಿ. ಹೀಗಾಗಿ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಅದಕ್ಕಾಗಿ ತರಕಾರಿಗಳನ್ನು ಉಪಯೋಗಿಸಿ, ಕಡಿಮೆ ಮಸಾಲೆ ಹಾಕಿ ಶುಚಿಯಾದ, ರುಚಿಕರ ತಿಂಡಿಗಳನ್ನು ಮಾಡಿಕೊಟ್ಟರೆ ಮಕ್ಕಳಿಗೆ ರುಚಿಯಾದ ಹಾಗೂ ಆರೋಗ್ಯಕರವಾದ ಆಹಾರವೂ ಸಿಕ್ಕಿದಂತಾಗುತ್ತದೆ.

ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ತಾಯಂದಿರ ಪಾತ್ರ ದೊಡ್ಡದು. ಅವರ ಪ್ರತೀ ನಡೆಯ ಮೇಲೂ ಒಂದು ರಕ್ಷಣಾ ಕವಚದ ಕಣ್ಣುಗಳನ್ನು ಇರಿಸಿ ಸರಿಯಾದ ಮಾರ್ಗದರ್ಶನ ನೀಡಿದರೆ ಮಕ್ಕಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಶಾಲೆಗೆ ಹೋಗುವ ಚಿಕ್ಕ ಮಕ್ಕಳು ವರ್ಷದಲ್ಲಿ ಐದರಿಂದ ಆರು ಬಾರಿ ಶೀತಕ್ಕೆ ಒಳಗಾಗುತ್ತಾರೆ. ಅದಕ್ಕೆ ಹೆದರುವುದು ಬೇಡ. ಆದರೆ ಅದರ ತೀವ್ರತೆ ಬಗ್ಗೆ ಎಚ್ಚರವಿರಲಿ. ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಮೊದಲ ಆದ್ಯತೆಯಾಗಿರಲಿ.

ಮಕ್ಕಳು ಕೆಲವೊಮ್ಮೆ ಬದಲಾದ ಹವಾಮಾನದಿಂದಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಿ. ಉದಾಹರಣೆಗೆ ಮಲೇರಿಯಾ, ಟೈಫಾಯಿಡ್‌ ಇತ್ಯಾದಿ.

Parents: Do your children get sick frequently? These could be the reasons ಪೋಷಕರೇ ಗಮನಿಸಿ : ನಿಮ್ಮ ಮಕ್ಕಳ ‘ಮೊಬೈಲ್’ ಚಟ ಬಿಡಿಸಲು ಇಲ್ಲಿದೆ ಟಿಪ್ಸ್
Share. Facebook Twitter LinkedIn WhatsApp Email

Related Posts

ಯಾವುದೇ ಜಾತಿ, ಧರ್ಮದ ರೆಕಮಂಡ್ ಇರಲ್ಲ , ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿ : ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚನೆ

1 Min Read

ಜನ ಮೆಚ್ಚುವಂತೆ ಕೆಲಸ ಮಾಡಿ, ಸರ್ಕಾರಕ್ಕೂ ಒಳ್ಳೆ ಹೆಸರು ತಂದು, ನೀವು ಹೆಸರು ಮಾಡಿ : ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ

2 Mins Read

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು : ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆ ಶಿವಕುಮಾರ್

1 Min Read
Recent News

ಯಾವುದೇ ಜಾತಿ, ಧರ್ಮದ ರೆಕಮಂಡ್ ಇರಲ್ಲ , ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿ : ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚನೆ

ಜನ ಮೆಚ್ಚುವಂತೆ ಕೆಲಸ ಮಾಡಿ, ಸರ್ಕಾರಕ್ಕೂ ಒಳ್ಳೆ ಹೆಸರು ತಂದು, ನೀವು ಹೆಸರು ಮಾಡಿ : ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು : ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆ ಶಿವಕುಮಾರ್

BIG NEWS : ರೈಲ್ವೆ ಟಿಕೆಟ್ ವಂಚನೆ ತಡೆಗೆ `IRCTC’ ಮಹತ್ವದ ಕ್ರಮ : 9 ಕೋಟಿ ಖಾತೆಗಳು ನಿಷೇಧ | IRCTC Blocks 90 Million User Accounts

State News
KARNATAKA

ಯಾವುದೇ ಜಾತಿ, ಧರ್ಮದ ರೆಕಮಂಡ್ ಇರಲ್ಲ , ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿ : ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚನೆ

By ಸುರೇಶ್‌ KARNATAKA 1 Min Read

ಬೆಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿ ಆದ ಎರಡನೇ ದಿನಕ್ಕೆ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚುರುಕು ಮುಟ್ಟಿಸಿದ್ದಾರೆ.…

ಜನ ಮೆಚ್ಚುವಂತೆ ಕೆಲಸ ಮಾಡಿ, ಸರ್ಕಾರಕ್ಕೂ ಒಳ್ಳೆ ಹೆಸರು ತಂದು, ನೀವು ಹೆಸರು ಮಾಡಿ : ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು : ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆ ಶಿವಕುಮಾರ್

BIG NEWS : ಮಾಜಿ MLC ದಯಾನಂದ ರೆಡ್ಡಿ ಕಿಡ್ನ್ಯಾಪ್ ಪ್ರಕರಣ : ನಾಲ್ವರು ಆರೋಪಿಗಳು ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.